ಕರ್ನಾಟಕ

karnataka

ETV Bharat / bharat

ದ್ವೇಷ ಭಾಷಣ: ಎಸ್​ಪಿ ಸಂಸದ ಅಜಂ ಖಾನ್​ಗೆ 3 ವರ್ಷ ಜೈಲು ಶಿಕ್ಷೆ - ಪ್ರಧಾನಿ ಮೋದಿ ಟೀಕಿಸಿದ್ದ ಅಜಂ ಖಾನ್​

ಸಮಾಜವಾಗಿ ಪಕ್ಷದ ನಾಯಕ, ಸಂಸದ ಅಜಂ ಖಾನ್​ ಅವರು ದ್ವೇಷ ಭಾಷಣ ಮಾಡಿದ ಕೇಸ್​ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

azam-khan-hate-speech-case-verdict
ಎಸ್​ಪಿ ಸಂಸದ ಅಜಂ ಖಾನ್​ಗೆ 3 ವರ್ಷ ಜೈಲು ಶಿಕ್ಷೆ

By

Published : Oct 27, 2022, 4:49 PM IST

Updated : Oct 27, 2022, 5:03 PM IST

ರಾಂಪುರ(ಉತ್ತರಪ್ರದೇಶ):ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ದ್ವೇಷ ಭಾಷಣ ಮಾಡಿದ್ದ ಸಮಾಜವಾದಿ ಪಕ್ಷದ ನಾಯಕ, ಸಂಸದ ಅಜಂ ಖಾನ್​ಗೆ ಉತ್ತರಪ್ರದೇಶ ಸೆಷನ್ಸ್​ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ, 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

2019 ರ ಲೋಕಸಭೆ ಚುನಾವಣೆಯ ಸಾರ್ವಜನಿಕ ಸಭೆಯಲ್ಲಿ ಅಜಂ ಖಾನ್ ಮಾಡಿದ್ದ ಭಾಷಣದ ವೇಳೆ ದ್ವೇಷದಿಂದ ದೇಶದ ಪ್ರಧಾನಿ, ಉತ್ತರಪ್ರದೇಶ ಸಿಎಂ ವಿರುದ್ಧ ಅವಹೇಳನಕಾರಿಯಾಗಿ ಟೀಕಿಸಿದ್ದರು. ಅಲ್ಲದೇ, ಕೋಮ ಸೌಹಾರ್ದತೆ ಕೆರಳಿಸುವ ಮಾತನಾಡಿದ್ದರು. ಇದರ ವಿಡಿಯೋ ವೈರಲ್​ ಆಗಿತ್ತು. ಈ ಬಗ್ಗೆ ಬಿಜೆಪಿ ದೂರು ದಾಖಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ರಾಂಪುರ ಜಿಲ್ಲಾ ಸೆಷನ್ಸ್​ ನ್ಯಾಯಾಲಯ ಈಚೆಗಷ್ಟೇ ವಾದ ಮುಗಿಸಿತ್ತು. ಪ್ರಕರಣದಲ್ಲಿ ಸಾಕ್ಷ್ಯಧಾರಗಳು ಬಲವಾಗಿದ್ದ ಕಾರಣ ಅಜಂ ಖಾನ್​ರನ್ನು ದೋಷಿ ಎಂದು ಕೋರ್ಟ್​ ಪರಿಗಣಿಸಿತ್ತು. ತೀರ್ಪು ಕಾಯ್ದಿರಿಸಿದ್ದ ನ್ಯಾ.ನಿಶಾಂತ್​ ಮಾನ್​ ಅವರು ಇಂದು ಮಧ್ಯಾಹ್ನ ತೀರ್ಪು ಪ್ರಕಟಿಸಿದರು.

ಎಸ್​ಪಿ ನಾಯಕ ದ್ವೇಷ ಭಾಷಣ ಮಾಡಿರುವುದು ಸಾಬೀತಾಗಿದೆ. ಕೋಮು ಸೌಹಾರ್ದತೆ ಕೆರಳಿಸಿದ ಕಾರಣ ಅವರನ್ನು ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಅಜಂ ಖಾನ್​ರಿಗೆ 3 ವರ್ಷ ಜೈಲು ಶಿಕ್ಷೆ, 25 ಸಾವಿರ ದಂಡ ವಿಧಿಸಲಾಗಿದೆ.

2 ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಗೆ ಒಳಗಾಗುವ ರಾಜಕಾರಣಿಯು ತನ್ನ ಈಗಿರುವ ಸ್ಥಾನ ಕಳೆದುಕೊಳ್ಳಲಿದ್ದಾರೆ. 3 ವರ್ಷ ಶಿಕ್ಷಗೆ ಗುರಿಯಾಗಿರುವ ಅಜಂ ಖಾನ್​ ಸಂಸದ ಸ್ಥಾನದಿಂದ ವಜಾಗೊಳ್ಳಲಿದ್ದಾರೆ.

ಇದನ್ನೂ ಓದಿ:ನಮಗೆ ರಾಜಕೀಯ ಇಚ್ಛಾಶಕ್ತಿ ಇರುವುದರಿಂದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ: ಸಚಿವ ಶ್ರೀರಾಮುಲು

Last Updated : Oct 27, 2022, 5:03 PM IST

ABOUT THE AUTHOR

...view details