ದಿಂಡಿಗಲ್( ತಮಿಳುನಾಡು): ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರನ್ನು ಹೊತ್ತು ಸಾಗುತ್ತಿದ್ದ ಮಿನಿ ವ್ಯಾನ್ವೊಂದು ಅಪಘಾತಕ್ಕೆ ಒಳಗಾಗಿದ್ದು, ಒಬ್ಬ ಅಯ್ಯಪ್ಪ ಭಕ್ತ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಂಗಳವಾರ ತಮಿಳು ನಾಡಿನ ವೆದಸಂಡೂರ್ನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ. ಕರ್ನಾಟಕದ ಸುಮಾರು 20 ಮಂದಿ ಭಕ್ತರು ಶಬರಿಮಲೆಗೆ ಪ್ರಯಾಣ ಬೆಳೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತ ಸಾವು, ಇಬ್ಬರಿಗೆ ಗಾಯ - ದಿಂಡಿಗಲ್ ಸರ್ಕಾರಿ ಆಸ್ಪತ್ರೆ
ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರಿದ್ದ ವಾಹನ ಅಪಘಾತ - ಕರ್ನಾಟಕದ ಭಕ್ತನ ಸಾವು - ಇಬ್ಬರಿಗೆ ಗಾಯ
![ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತ ಸಾವು, ಇಬ್ಬರಿಗೆ ಗಾಯ ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತ ಸಾವು, ಇಬ್ಬರಿಗೆ ಗಾಯ](https://etvbharatimages.akamaized.net/etvbharat/prod-images/768-512-17383310-733-17383310-1672731893123.jpg)
ayyappa-devotee-from-karnataka-who-was-on-his-way-to-sabarimala-died-two-injured
ಗಾಯಗೊಂಡಿರುವ ಇಬ್ಬರನ್ನು ದಿಂಡಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆ ಕುರಿತು ಮಾತನಾಡಿರುವ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ ಮೂಲದ 20 ಭಕ್ತರಿದ್ದ ಮಿನಿ ವ್ಯಾನ್ ಅಪಘಾತಕ್ಕೆ ಒಳಗಾಗಿದೆ ಎಂಬುದನ್ನು ಖಚಿತಪಡಿಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ಜಾರ್ಖಂಡ್: ಮೂವರ ಬಲಿ ಪಡೆದ ಚಿರತೆ ಹತ್ಯೆಗೆ ಅರಣ್ಯ ಇಲಾಖೆ ಚಿಂತನೆ