ಚಂಡೀಗಢ :ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ತಂದೆ ಮತ್ತು ಖ್ಯಾತ ಜ್ಯೋತಿಷಿ ಪಿ ಖುರಾನಾ ಚಂಡೀಗಢದಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. ಪಿ ಖುರಾನಾ ಅವರು ಕಳೆದ ಕೆಲವು ದಿನಗಳಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸಾವಿನ ಸುದ್ದಿ ಅವರ ಗೆಳೆಯರು, ಕುಟುಂಬಸ್ಥರು ಹಾಗೆಯೇ ಅವರ ಅಭಿಮಾನಿಗಳಿಗೆ ತೀವ್ರ ನೋವನ್ನು ಉಂಟು ಮಾಡಿದೆ. ಅವರ ಸಾವಿನ ಸುದ್ದಿಯನ್ನು ಕೇಳಿ ಬಾಲಿವುಡ್ ತಾರೆಯರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪಿ. ಖುರಾನಾ ಅವರು ಜ್ಯೋತಿಷ್ಯ ಕ್ಷೇತ್ರದಲ್ಲಿ ಪರಿಣತಿ:ಆಸ್ಪತ್ರೆಯಿಂದ ಬಂದ ಮಾಹಿತಿಯ ಪ್ರಕಾರ, ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಬೆಳಗ್ಗೆ ಇದ್ದಕ್ಕಿದ್ದಂತೆ ವೆಂಟಿಲೇಟರ್ ಕೆಲಸ ಮಾಡಲಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆ. ಅವರ ಅಂತಿಮ ಸಂಸ್ಕಾರ ನಾಳೆ ಬೆಳಗ್ಗೆ ಮಣಿಮಜರ ಸ್ಮಶಾನದಲ್ಲಿ ನಡೆಯಲಿದೆ ಎಂಬುದು ತಿಳಿದು ಬಂದಿದೆ. ಪಂಡಿತ್ ಪಿ ಖುರಾನಾ ಅವರು ಜ್ಯೋತಿಷ್ಯ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ್ದು, ಅವರು ಈ ಕುರಿತು ಹಲವಾರು ಪುಸ್ತಕಗಳನ್ನು ಬರೆದು ಹೆಸರುವಾಸಿಯಾಗಿದ್ದರು.
ಚಂಡೀಗಢದ ಖ್ಯಾತ ಜ್ಯೋತಿಷಿ ಪಿ ಖುರಾನಾ : ಪಿ ಖುರಾನಾ ಅವರು ಚಂಡೀಗಢದ ಅತ್ಯಂತ ಪ್ರಸಿದ್ಧ ಜ್ಯೋತಿಷಿ ಮತ್ತು ಆಯುಷ್ಮಾನ್ ಖುರಾನಾ ಅವರಿಗೆ ಬಹಳ ನಿಕಟರಾಗಿದ್ದರು. ಆಯುಷ್ಮಾನ್ ಖುರಾನಾ ಅವರನ್ನು ನಿನ್ನೆ ಪಂಜಾಬ್ ವಿಶ್ವವಿದ್ಯಾಲಯ ಚಂಡೀಗಢದಲ್ಲಿ ಉಪಾಧ್ಯಕ್ಷರು ಸನ್ಮಾನಿಸಬೇಕಿತ್ತು. ಆದರೆ, ಅವರ ತಂದೆಗೆ ಹೃದಯಾಘಾತವಾಗಿ ತಂದೆ ಪಿ ಖುರಾನಾ ಇಂದು ನಿಧನರಾದರು. ಅವರ ತಂದೆಯೇ ಆಯುಷ್ ಅವರ ಹೆಸರಿನ ಅಕ್ಷರಗಳನ್ನು ಬದಲಾಯಿಸುವ ಮೂಲಕ ಚಲನಚಿತ್ರಗಳಿಗೆ ಹೋಗಲು ಪ್ರೋತ್ಸಾಹಿಸಿದರು. ಇದರಿಂದಾಗಿ ಆಯುಷ್ಮಾನ್ ಅವರ ಚಲನಚಿತ್ರ ಪ್ರಯಾಣ ಪ್ರಾರಂಭವಾಯಿತು.