ಕರ್ನಾಟಕ

karnataka

ETV Bharat / bharat

ಅಕ್ಟೋಬರ್ 6 ರಿಂದ ಅಯೋಧ್ಯೆ ರಾಮಲೀಲಾ ಕಾರ್ಯಕ್ರಮ ನೇರಪ್ರಸಾರ - ಉತ್ತರಪ್ರದೇಶ ಸಿಎಂ

ಅಕ್ಟೋಬರ್ 6 ರಿಂದ 15 ರವರೆಗೆ ರಾಮಲೀಲಾವನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ರಾಮಲೀಲಾ ಸಮಿತಿಯ ಅಧ್ಯಕ್ಷ ಸುಭಾಷ್ ಮಲಿಕ್ ಹೇಳಿದ್ದಾರೆ.

Ayodhya's Ramlila
Ayodhya's Ramlila

By

Published : Sep 12, 2021, 8:17 AM IST

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ರಾಮಲೀಲಾವನ್ನು ವಾಸ್ತವಿಕವಾಗಿ ನಡೆಸಲಾಗುವುದು ಮತ್ತು ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ಅಯೋಧ್ಯೆಯ ರಾಮಲೀಲಾ ಸಮಿತಿಯು ಮಾಹಿತಿ ನೀಡಿದೆ.

ಈ ವರ್ಷ ರಾಮ್ ಲೀಲಾ ಆಚರಣೆಗಳು ವಾಸ್ತವಿಕವಾಗಿ ನಡೆಯಲಿವೆ. ಚಿತ್ರರಂಗದ ಹಲವಾರು ಕಲಾವಿದರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಮಲೀಲಾ ಸಮಿತಿಯ ಅಧ್ಯಕ್ಷ ಸುಭಾಷ್ ಮಲಿಕ್ ಹೇಳಿದ್ದಾರೆ.

ಅಕ್ಟೋಬರ್ 6 ರಿಂದ 15 ರವರೆಗೆ ರಾಮಲೀಲಾವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುವುದು. ಸುಮಾರು 35 ಸಿನಿಮಾ ತಾರೆಯರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಮತ್ತು ಉತ್ತರಪ್ರದೇಶ ಸಿಎಂಗೆ ಆಹ್ವಾನ ಕಳಿಸಿದ್ದೇವೆ ಎಂದು ಮಲಿಕ್ ತಿಳಿಸಿದ್ದಾರೆ.

ಇದನ್ನೂ ಓದಿ: 2023ರ ಡಿಸೆಂಬರ್​ ವೇಳೆಗೆ ಅಯೋಧ್ಯಾ ರಾಮಮಂದಿರ ಭಕ್ತರಿಗೆ ಓಪನ್​​!

ದಸರಾವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ. ಇದು ನವರಾತ್ರಿಯ ಅಂತ್ಯವನ್ನು ಸೂಚಿಸುವ ಪ್ರಮುಖ ಹಿಂದೂ ಹಬ್ಬವಾಗಿದೆ. ಅಕ್ಟೋಬರ್ 15 ರಿಂದ ದಸರಾ ಆರಂಭವಾಗಲಿದೆ.

ABOUT THE AUTHOR

...view details