ಅಯೋಧ್ಯೆ: ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿ ಮತ್ತು ಆಸ್ಪತ್ರೆ ಕಟ್ಟಡಕ್ಕೆ 164 ವರ್ಷಗಳ ಹಿಂದೆ ನಿಧನರಾದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ ಮೌಲ್ವಿ ಅಹ್ಮದುಲ್ಲಾ ಷಾ ಫೈಜಾಬಾದಿ ಅವರ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.
ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್), ಮಸೀದಿ, ಆಸ್ಪತ್ರೆ, ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಮತ್ತು ಸಮುದಾಯ ಅಡುಗೆ ಮನೆ ಒಳಗೊಂಡ ಸಂಪೂರ್ಣ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿದ ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್, “ಫೈಜಾಬಾದಿ ಹುತಾತ್ಮರಾದ ದಿನದಂದು, ಇಡೀ ಯೋಜನೆಯ ಹೆಸರನ್ನು ಅವರ ಹೆಸರಿನಿಂದಲೇ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಜನವರಿಯಲ್ಲಿ, ನಾವು ಸಂಶೋಧನಾ ಕೇಂದ್ರವನ್ನು ಹಿಂದೂ-ಮುಸ್ಲಿಂ ಸಹೋದರತ್ವದ ಪ್ರತಿಮೆಯಾಗಿದ್ದ ಮೌಲ್ವಿ ಫೈಜಾಬಾದಿಗೆ ಅರ್ಪಿಸಿದ್ದೇವೆ” ಎಂದರು.