ಅಯೋಧ್ಯಾ, ಉತ್ತರ ಪ್ರದೇಶ : ದರೋಡೆಕೋರ ಅತೀಕ್ ಅಹ್ಮದ್ ಪುತ್ರ ಅಸದ್ ಅಹ್ಮದ್‌ನನ್ನು ಎನ್‌ಕೌಂಟರ್‌ನಲ್ಲಿ ಹೊಡೆದಾಕಿದ ಯುಪಿ ಎಸ್‌ಟಿಎಫ್ (ವಿಶೇಷ ಕಾರ್ಯಪಡೆ)ಗೆ ಅಯೋಧ್ಯೆಯ ಹನುಮಾನ್‌ಗರ್ಹಿ ದೇವಸ್ಥಾನದ ಮುಖ್ಯ ಅರ್ಚಕ ರಾಜು ದಾಸ್ 51,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಪ್ರಯಾಗ್‌ರಾಜ್‌ನ ಪ್ರಸಿದ್ಧ ಉಮೇಶ್ ಪಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಸದ್, ಅವನ ಸಹಚರ ಗುಲಾಮ್ ಮೊಹಮ್ಮದ್‌ನನ್ನು ಎಸ್‌ಟಿಎಫ್ ತಂಡ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟನು.
ರಾಜ್ಯದ ಝಾನ್ಸಿ ಜಿಲ್ಲೆಯ ಬಬಿನಾ ಪ್ರದೇಶದಲ್ಲಿ ಯುಪಿ ಎಸ್‌ಟಿಎಫ್ ಎನ್‌ಕೌಂಟರ್ ನಡೆಸಿತ್ತು. ಈ ಕುರಿತು ಯುಪಿ ಮುಖ್ಯಮಂತ್ರಿಗಳು ಕಾರ್ಯಾಚರಣೆಯಲ್ಲಿ ತೊಡಗಿರುವ ಎಸ್‌ಟಿಎಫ್ ತಂಡವನ್ನು ಶ್ಲಾಘಿಸಿದ್ದರು. ಈ ಹಿನ್ನೆಲೆ ಅಯೋಧ್ಯೆಯ ಹನುಮಾನ್‌ಗರ್ಹಿ ದೇವಸ್ಥಾನದ ಮುಖ್ಯ ಅರ್ಚಕ ರಾಜು ದಾಸ್ ಸಹ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಅರ್ಚಕ ರಾಜು ದಾಸ್, ಯುಪಿ ಎಸ್‌ಟಿಎಫ್ ತಂಡವನ್ನು ಅಭಿನಂದಿಸಿದ್ದಾರೆ. ಯೋಗಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದರಿಂದ ದರೋಡೆಕೋರರಿಗೆ ರಾಜ್ಯವನ್ನು ತೊರೆಯುವಂತೆ ಎಚ್ಚರಿಕೆ ನೀಡಿದ್ದಾರೆ.
ಮಾಫಿಯಾಗೆ ಸಲಹೆ ನೀಡಿದ ಅರ್ಚಕ ರಾಜು ದಾಸ್:ಮಾತು ಮುಂದುವರಿಸಿದ ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದ ಪ್ರಧಾನ ಅರ್ಚಕ ರಾಜು ದಾಸ್, ರಾಜ್ಯದ ಎಲ್ಲ ಗೂಂಡಾ ಮಾಫಿಯಾಗಳಿಗೆ ನನ್ನ ಸಲಹೆ ಏನೆಂದರೆ, ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವವರೆಗೆ ಮತ್ತು ಬಾಬಾ (ಯೋಗಿ ಆದಿತ್ಯನಾಥ್) ಮುಖ್ಯಮಂತ್ರಿ ಆಗಿರುವವರೆಗೆ ನೀವೆಲ್ಲರೂ ರಾಜ್ಯವನ್ನು ಬಿಟ್ಟು ತೊರೆಯಬೇಕು ಅಥವಾ ತಮ್ಮ ತಮ್ಮ ಸಿದ್ಧಾಂತಗಳನ್ನು ಬದಲಾಯಿಸಬೇಕು ಎಂದು ಕರೆ ನೀಡಿದ್ದಾರೆ.