ಅಯೋಧ್ಯೆ: ಇನ್ನೇನು ಕೆಲವೇ ದಿನಗಳಲ್ಲಿ ಬರುವ ಬೆಳಕಿನ ಹಬ್ಬಕ್ಕೆ ಅಯೋಧ್ಯೆಯಲ್ಲಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಲ್ಲೂ 6 ಲಕ್ಷ ಮಣ್ಣಿನ ದೀಪಗಳು ಈ ಬಾರಿ ಹೆಚ್ಚು ಆಕರ್ಷಣೆ ಮಾಡಲಿವೆ.
: 6 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲು ಸಿದ್ಧವಾದ ಆರ್ಎಂಎಲ್ ವಿವಿ ಡಾ.ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯವು ಈ ವ್ಯವಸ್ಥೆ ಮಾಡುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ವಾರಗಟ್ಟಲೆ ನಡೆಯುತ್ತಿದ್ದ ದಿಪಾವಳಿ ಈ ವರ್ಷ ಕೋವಿಡ್ನಿಂದ ಕೇವಲ ಮೂರು ದಿನಗಳ ವರೆಗೆ ನಡೆಯಲಿದೆ. ಇನ್ನು ಕೆಲವೇ ದಿನಗಳು ನಡೆಯುವ ಈ ದೀಪಾವಳಿಗೆ ವಿವಿಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತುಂಬಾ ಸುಂದರವಾಗಿ ಶೃಂಗಾರ ಮಾಡುತ್ತಿದ್ದಾರೆ.
6 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲು ಸಿದ್ಧವಾದ ಆರ್ಎಂಎಲ್ ವಿವಿ ನವೆಂಬರ್ 13 ರಂದು ಬೆಳಿಗ್ಗೆ 10 ಗಂಟೆಗೆ ಡಯಾಸ್ ಅನ್ನು ಅಲಂಕರಿಸಿ ಈ ಆರು ಲಕ್ಷ ದೀಪ ಬೆಳಗಿಸಲಾಗುತ್ತದೆ ಮತ್ತು ನಿಗದಿತ ಸಮಯದೊಳಗೆ ಎಚ್ಚರಿಕೆಯಿಂದ ಈ ಕೆಲಸ ಮಾಡುತ್ತೇವೆ.ಸ್ವಯಂಸೇವಕರು ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ ಎಂದು ಪ್ರೊ. ವರ್ಮಾ ಮಾಹಿತಿ ನೀಡಿದ್ದಾರೆ.
: 6 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲು ಸಿದ್ಧವಾದ ಆರ್ಎಂಎಲ್ ವಿವಿ ದೀಪೋತ್ಸವದಲ್ಲಿ ಭಾಗವಹಿಸಲು ಅಧಿಕಾರಿಗಳು ಮತ್ತು ಸ್ವಯಂಸೇವಕರ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಆಹ್ವಾನಿತರನ್ನು ಹೊರತುಪಡಿಸಿ ಬೇರೆ ಯಾರಿಗೂ ದೀಪೋತ್ಸವ ಸ್ಥಳದಲ್ಲಿ ಅವಕಾಶ ನೀಡಲಾಗುವುದಿಲ್ಲ. ದೀಪೋತ್ಸವ ಸ್ಥಳದಲ್ಲಿ ಎಲ್ಲಾ ಸ್ವಯಂಸೇವಕರು ಮತ್ತು ಪದಾಧಿಕಾರಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.