ಕರ್ನಾಟಕ

karnataka

ETV Bharat / bharat

ಕೊರೊನಾ ವ್ಯಾಕ್ಸಿನ್ ಸಾಗಾಟ: ಕೇಂದ್ರ ತಂಡದಿಂದ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚೆ - ನಾಗರಿಕ ವಿಮಾನಯಾನ ಸಚಿವಾಲಯ

ಲಸಿಕೆ ಪೂರೈಸಲು ಉತ್ತರ ಭಾರತದಲ್ಲಿ ದೆಹಲಿ ಮತ್ತು ಕರ್ನಾಲ್, ಪೂರ್ವ ಭಾರತದಲ್ಲಿ ಕೋಲ್ಕತಾ ಮತ್ತು ಗುವಾಹಟಿ, ದಕ್ಷಿಣ ಭಾರತದಲ್ಲಿ ಚೆನ್ನೈ ಮತ್ತು ಹೈದರಾಬಾದ್ ನಗರಗಳನ್ನು ಮಿನಿ ಹಬ್​ಗಳನ್ನಾಗಿ ಮಾಡಲಾಗಿದೆ.

corona vaccine
ಕೊರೊನಾ ಲಸಿಕೆ

By

Published : Jan 7, 2021, 8:19 PM IST

ನವದೆಹಲಿ:ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ತುರ್ತು ಬಳಕೆಗಾಗಿ ಸರ್ಕಾರ ಅನುಮೋದಿಸಿದ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ವಿಮಾನಯಾನ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಕೋವಿಡ್ ಲಸಿಕೆಯನ್ನು ಯಾವ ರೀತಿ ಸಾಗಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೊರೊನಾ ಲಸಿಕೆಗಳನ್ನು ಸಾಗಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಕರಡು ಯೋಜನೆಯನ್ನು ಸಿದ್ಧಪಡಿಸಿದ್ದಾರೆ ಎಂದು ಉನ್ನತ ಮೂಲಗಳು ಈಟಿವಿ ಭಾರತ್​ಗೆ ಮಾಹಿತಿ ನೀಡಿವೆ.

ದೇಶಾದ್ಯಂತ 41 ಸ್ಥಳಗಳಿಗೆ ಎರಡು ಕೋಟಿ ಡೋಸ್​ಗಳಷ್ಟು ಕೋವಿಡ್ ಲಸಿಕೆಯನ್ನು ಪುಣೆ ವಿಮಾನ ನಿಲ್ದಾಣದಿಂದ ದೇಶಾದ್ಯಂತ ಇತರ ಸ್ಥಳಗಳಿಗೆ ಜನವರಿ 8ರೊಳಗೆ ತಲುಪಿಸಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:3ನೇ ಹಂತದ ಕ್ಲಿನಿಕಲ್​ ಪ್ರಯೋಗಕ್ಕಾಗಿ 25,800 ಸ್ವಯಂ ಸೇವಕರ ನೇಮಕ: ಭಾರತ್​ ಬಯೋಟೆಕ್​

ಪುಣೆಯಿಂದ ಲಸಿಕೆ ಸಾಗಿಸುವ ಕೆಲಸವನ್ನು ಏರ್​ಪೋರ್ಟ್​ ಅಥಾರಿಟಿ ಆಫ್ ಇಂಡಿಯಾ ಕಾರ್ಗೋ ಲಾಜಿಸ್ಟಿಕ್ಸ್ ಮತ್ತು ಅಲೈಡ್ ಸರ್ವೀಸಸ್ ಕಂಪನಿ ಲಿಮಿಟೆಡ್ (ಎಎಐಸಿಎಎಲ್‍ಎಸ್) ಮೇಲ್ವಿಚಾರಣೆ ಮಾಡಲಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಲಸಿಕೆ ಪೂರೈಸಲು ಉತ್ತರ ಭಾರತದಲ್ಲಿ ದೆಹಲಿ ಮತ್ತು ಕರ್ನಾಲ್, ಪೂರ್ವ ಭಾರತದಲ್ಲಿ ಕೋಲ್ಕತಾ ಮತ್ತು ಗುವಾಹಟಿ, ದಕ್ಷಿಣ ಭಾರತದಲ್ಲಿ ಚೆನ್ನೈ ಮತ್ತು ಹೈದರಾಬಾದ್ ನಗರಗಳನ್ನು ಮಿನಿ ಹಬ್​ಗಳನ್ನಾಗಿ ಮಾಡಲಾಗಿದೆ.

ಲಭ್ಯವಿರುವ ಮಾಹಿತಿಯಂತೆ, ಇಂಡಿಗೊ ಮತ್ತು ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗಳು ಕೋವಿಡ್ ಲಸಿಕೆ ಸಾಗಣೆಗೆ ವ್ಯವಸ್ಥೆ ಮಾಡುವ ಪ್ರಕ್ರಿಯೆಯಲ್ಲಿದೆ. ಇದಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆಯೂ ಕೂಡಾ ಸಂತಸ ವ್ಯಕ್ತಪಡಿಸಿದೆ.

ABOUT THE AUTHOR

...view details