ನವದೆಹಲಿ: ದೇಶದಲ್ಲಿ ಕೊರೊನಾ 2ನೇ ಅಲೆ ಕೈಗಾರಿಕಾ ವಲಯದ ಮೇಲೆ ಇನ್ನಿಲ್ಲದ ಪರಿಣಾಮ ಉಂಟುಮಾಡಿದೆ. ಅದರಲ್ಲೂ ಆಟೋಮೊಬೈಲ್ಸ್ ಕ್ಷೇತ್ರ ಕೊರೊನಾಗೆ ಸಿಲುಕಿ ನಷ್ಟ ಅನುಭವಿಸುವಂತಾಗಿದೆ.
ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (ಇಂಡಿಯಾ) ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಹೋಂಡಾ ಕಾರ್ಸ್ ಮಾರಾಟ ಪ್ರಮಾಣ ಇಳಿಕೆಯಾಗುವ ಭೀತಿ ಎದುರಿಸುತ್ತಿವೆ.
ದೇಶದ ಅತೀದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಕಾರುಗಳ ಮಾರಾಟವು ಗ್ರಾಹಕರ ಆರ್ಥಿಕ ಬೆಳವಣಿಯೊಂದಿಗೆ ನೇರ ಸಂಬಂಧ ಮತ್ತು ಗ್ರಾಹಕರ ಭಾವನೆಗೂ ನಿಕಟ ಸಂಬಂಧವಿದೆ ಎಂದಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ಕಾರುಗಳನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗುವುದಿಲ್ಲ. ಇದಲ್ಲದೇ ಕೊರೊನಾ ಪರಿಸ್ಥಿತಿ ಹದಗೆಡುವುದು ಸಹ ಗ್ರಾಹಕರು ಮಾನಸಿಕವಾಗಿ ಖರೀದಿ ಮೇಲೆ ಒಲವು ತೋರುವುದಿಲ್ಲ ಎಂದಿದ್ದಾರೆ.
ಇದೇ ರೀತಿ ಕೊರೊನಾ 2ನೇ ಅಲೆ ಕುರಿತು ಪ್ರತಿಕ್ರಿಯಿಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ, ಸ್ಥಳೀಯವಾಗಿ ಹೇರಲಾದ ನಿಯಮಾವಳಿಗಳು ಕಾರುಗಳ ಬುಕ್ಕಿಂಗ್ ಹಾಗೂ ಡೆಲಿವರಿ ಮೇಲೆ ಪ್ರಭಾವ ಬೀರಿದೆ ಎಂದಿದ್ದಾರೆ.
ಕೋವಿಡ್ ನಿಯಮಾವಳಿಗಳು ಸಡಿಲಗೊಂಡ ಬಳಿಕ ತಿಂಗಳ ಅಂತ್ಯದಲ್ಲಿ ನಮಗೆ ಸರಿಯಾದ ಅಂಕಿ - ಅಂಶ ದೊರಕುತ್ತದೆ. ಈ ದಿನಾಂಕದ ವರೆಗೂ ನಾವು ಉತ್ತಮ ಸಂಖ್ಯೆಯ ಬುಕ್ಕಿಂಗ್ ಹೊಂದಿದ್ದೇವೆ. ಆದರೆ, ಎಲ್ಲಾ ಗ್ರಾಹಕರಿಗೂ ನಾವು ಡೆಲಿವರಿ ನೀಡಲಾಗುತ್ತಿಲ್ಲ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ನ ಬುಕ್ಕಿಂಗ್ಗಳನ್ನು ನಾವು ಮುಂದೆ ಹಾಕಿದ್ದೇವೆ. ಲಾಕ್ಡೌನ್, ಕೊರೊನಾ ನಡುವೆಯೂ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಕೊರೊನಾ; ಸಾವಿರ ಅಂಕ ಕುಸಿದ ಸೆನ್ಸೆಕ್ಸ್!