ಔರಂಗಾಬಾದ್(ಮಹಾರಾಷ್ಟ್ರ): ಎಐಎಂಐಎಂ ಸಂಸದ ಅಕ್ಬರುದ್ದೀನ್ ಓವೈಸಿ ಭೇಟಿಯ ನಂತರ ಔರಂಗಜೇಬನ ಕಬ್ರಿ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದಿನ ಐದು ದಿನಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ.
ಅಕ್ಬರುದ್ದೀನ್ ಓವೈಸಿ ಅವರು ಖುಲ್ತಾಬಾದ ಭೇಟಿಯ ಸಂದರ್ಭದಲ್ಲಿ ಔರಂಗಜೇಬ್ ಸಮಾಧಿಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಮಹಾರಾಷ್ಟ್ರದ ಖುಲ್ತಾಬಾದಿನಲ್ಲಿ ಔರಂಗಜೇಬನ ಸಮಾಧಿ ಏಕಿದೆ ಎಂಬ ? ಈ ಪ್ರಶ್ನೆಯನ್ನು ಎಂಎನ್‌ಎಸ್ ಜಿಲ್ಲಾಧ್ಯಕ್ಷ ಸುಮಿತ್ ಖಂಬೆಕರ್ ಎತ್ತಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳಿಂದಾಗಿ ಖುಲ್ತಾಬಾದಿನಲ್ಲಿನ ಕಾನೂನು ಸುವ್ಯವಸ್ಥೆ ಅಸ್ಥಿರವಾಗುತ್ತಿದ್ದು, ಔರಂಗಜೇಬ್ ಸಮಾಧಿ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಕೆಲವು ಸಶಸ್ತ್ರ ಪೊಲೀಸರೊಂದಿಗೆ ವಿಶೇಷ ಗಸ್ತು ಆರಂಭಿಸಲಾಗಿದೆ.
ಇದನ್ನೂ ಓದಿ :ಮದುವೆಯಾಗದೇ ಮಗು ಕರುಣಿಸಿದ್ದ ಕಿರಾತಕ: ಮೊಮ್ಮಗಳನ್ನು ನೋಡಲು ಬಂದ ಭಾವಿ ಅತ್ತೆಗೆ ಚಾಕು ಇರಿದ!