ಕರ್ನಾಟಕ

karnataka

ETV Bharat / bharat

ವಿದೇಶಿ ಅತಿಥಿಗಳನ್ನು ಆಕರ್ಷಿಸುತ್ತಿರುವ ಔರಂಗಾಬಾದ್ ಪೈಥಾನಿ ಸೀರೆ ಮತ್ತು ಕೊಲ್ಹಾಪುರಿ ಚಪ್ಪಲಿ: ಇವುಗಳ ವಿಶೇಷತೆ ಏನು ಗೊತ್ತೆ?

G20 Summit: ದೆಹಲಿಯಲ್ಲಿ ನೆಡಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರಿ ಚಪ್ಪಲಿ ಮತ್ತು ಔರಂಗಾಬಾದ್ ಪೈಥಾನಿ ಸೀರೆ ಪ್ರದರ್ಶನ ವಿದೇಶಿ ಅತಿಥಿಗಳ ಗಮನ ಸೆಳೆಯುತ್ತಿದೆ.

aurangabad-paithani-and-kolhapuri-chappal-in-g20-summit-at-delhi
ವಿದೇಶಿ ಗಣ್ಯರನ್ನು ಆಕರ್ಷಿಸುತ್ತಿರುವ ಔರಂಗಾಬಾದ್ ಪೈಥಾನಿ ಸೀರೆ ಮತ್ತು ಕೊಲ್ಹಾಪುರಿ ಚಪ್ಪಲಿ: ಇವುಗಳ ವಿಶೇಷತೆ ಏನು ಗೊತ್ತೆ?

By ETV Bharat Karnataka Team

Published : Sep 9, 2023, 6:48 PM IST

Updated : Sep 9, 2023, 7:27 PM IST

ಛತ್ರಪತಿ ಸಂಭಾಜಿನಗರ(ಮಹಾರಾಷ್ಟ್ರ): ಜಿ20 ಶೃಂಗಸಭೆ ದೆಹಲಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಇನ್ನು ಈ G20 ಸಮ್ಮೇಳನದಲ್ಲಿ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ಕೊಲ್ಹಾಪುರಿ ಚಪ್ಪಲಿ ಮತ್ತು ಔರಂಗಾಬಾದ್ ಪೈಥಾನಿ ಸೀರೆ ಪ್ರಮುಖ ಆಕರ್ಷಣೆಯಾಗಿದೆ. ಈ ಮೂಲಕ ವಿಶ್ವದ ಇತರೆ ದೇಶಗಳಲ್ಲಿ ದೇಶೀಯ ಉತ್ಪನ್ನಗಳ ಬಗ್ಗೆ ಪ್ರಚಾರ ಮತ್ತು ವ್ಯವಹಾರಕ್ಕೆ ಇದೊಂದು ಜಿ20 ಶೃಂಗಸಭೆಯನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ. 20 ದೇಶಗಳ ಅತಿಥಿಗಳಿಗೆ ಹಿಮ್ರೂ ಶಾಲು ಹೊದಿಸಿ ಮತ್ತು ಪೈಥಾನಿ ಸೀರೆ, ಪೇಟ ನೀಡಿ ಸ್ವಾಗತಿಸಲಾಯಿತು.

ಪೈಥಾನಿ ಸೀರೆಯ ವಿಶೇಷತೆ ಏನು?:ವಿಶ್ವಪ್ರಸಿದ್ಧ ಪೈಥಾನಿ ಪ್ರಾಚೀನ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿದೆ. ಪೈಥಾನಿ ಎಂಬುದು ಔರಂಗಾಬಾದ್ ಜಿಲ್ಲೆಯ ಪೈಠಾಣ್ ತಾಲೂಕಿನ ಕೈಮಗ್ಗದಲ್ಲಿ ತಯಾರಿಸಲಾಗುವ ಸೀರೆಯಾಗಿದೆ. ಪೈಥಾನಿ ಸೀರೆಯನ್ನು ತಯಾರಿಸಲು ಒಬ್ಬ ನೇಕಾರನಿಗೆ ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ. ಥ್ರೆಡ್ ಮೆಷಿನ್‌ನಲ್ಲಿ ಥ್ರೆಡ್ ಅನ್ನು ಜೋಡಿಸುವ ಮೂಲಕ ಈ ಪೈಥಾನಿಯನ್ನು ತಯಾರಿಸಲಾಗುತ್ತದೆ.

ಇದನ್ನು ಸಿಲ್ಕ್ ಕ್ಲಾತ್ ಎಂದೂ ಕರೆಯುತ್ತಾರೆ. ಪೈಥಾನಿಯ ವಿಶೇಷತೆ ಏನೆಂದರೆ, ಒಂದೇ ದಾರಿದಿಂದ ಕೈಯಿಂದ ಮಾಡಿದ ಸೀರೆಯಾಗಿದೆ ಮತ್ತು ಇದರ ಕಸೂತಿ ಕಲೆ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ಪೈಥಾನಿ ಸೀರೆಯನ್ನು ಶುದ್ಧ ರೇಷ್ಮೆ ಮತ್ತು ಚಿನ್ನದ ಝರಿಯಲ್ಲಿ ನೇಯ್ಗೆ ಮಾಡಲಾಗುತ್ತದೆ. ಜೊತೆಗೆ ವೈವಿಧ್ಯಮಯ ಬಣ್ಣಗಳಿಂದ ಮಾಡಲಾಗುವುದರಿಂದ ಹೆಸರು ವಾಸಿಯಾಗಿದೆ. ಪೈಥಾನಿ ಸೀರೆಯ ಕಥ್ (ಬಾರ್ಡರ್) ಮತ್ತು ಪದರ್ ಅಥವಾ ಪಲ್ಲು (ಅಂಚು)ಗಳಲ್ಲಿ ನವಿಲು, ಗಿಳಿ ಮತ್ತು ಕಮಲಗಳು ಸೇರಿದಂತೆ ವಿಭಿನ್ನವಾದ ಚಿತ್ರಗಳನ್ನು ಹೊಂದಿರುವುದು ಈ ಸೀರೆಯ ಲಕ್ಷಣವಾಗಿದೆ.

ಪೈಥಾನಿಯನ್ನು ಖರೀದಿಸಬೇಕೆಂಬುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಆದರೆ, ಈ ಸೀರಿಯನ್ನು ಧರಿಸಲು ಹಿಂದೆ ಎಲ್ಲ ಮಹಿಳೆಯರಿಗೂ ಸಾಧ್ಯವಾಗುತ್ತಿರಲಿಲ್ಲ. ಈ ಹಿಂದೆ ಪೈಥಾನಿಯನ್ನು ಧರಿಸಿದ ಮಹಿಳೆಯನ್ನು ರಾಜಮನೆತನಕ್ಕೆ ಸೇರಿದವಳು ಎಂದು ಹೇಳಲಾಗುತ್ತಿತ್ತು. ನಂತರದಲ್ಲಿ ಕಪ್ಪು ಬಣ್ಣದ ಪೈಥಾನಿಯಲ್ಲಿ ಅನೇಕ ಬದಲಾವಣೆಗಳು ಉಂಟಾದವು. ಇದರಲ್ಲಿ ಮಿನಿ ಪೈಥಾನಿ ಮುನ್ನೆಲೆಗೆ ಬಂದಿತು. ಆದ್ದರಿಂದ ಈಗ ಪೈಥಾನಿ ಎಲ್ಲಾ ಮಹಿಳೆಯರಿಗೂ ಕೈಗೆಟುಕುವಂತಾಗಿದೆ. ಈ ಸೀರೆಯನ್ನು ಮಹಾರಾಷ್ಟ್ರದಲ್ಲಿ ಹೊರತುಪಡಿಸಿ ಪ್ರಪಂಚದಲ್ಲಿ ಬೇರೆಲ್ಲಿಯೂ ಉತ್ಪಾದಿಸಲಾಗುವುದಿಲ್ಲ. ಈ ಪೈಥಾನಿಯ ಬ್ರ್ಯಾಂಡಿಂಗ್ ಅನ್ನು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಲಾಗುತ್ತಿದೆ.

ಕೊಲ್ಹಾಪುರಿ ಚಪ್ಪಲಿ ವಿಶೇಷತೆ: ಅದೇ ರೀತಿ ಆಕರ್ಷಕ ಮತ್ತು ಗಟ್ಟಿಮುಟ್ಟಾದ ಕೊಲ್ಹಾಪುರಿ ಚಪ್ಪಲಿಗಳು ಎಲ್ಲರ ಆಕರ್ಷಣೆಯ ಕೇಂದ್ರವಾಗಿವೆ. ಈ ಚಪ್ಪಲಿಯನ್ನು ವಿದೇಶದಲ್ಲೂ ಮಾರಾಟ ಮಾಡಲಾಗುತ್ತದೆ. ಚರ್ಮದಿಂದ ತಯಾರಿಸಲಾದ ಚಪ್ಪಲಿಗಳ ಕರಕುಶಲತೆಯು ಕೊಲ್ಹಾಪುರಿ ಚಪ್ಪಲಿಗಳ ಸೌಂದರ್ಯ ಹೆಚ್ಚಿಸುತ್ತದೆ. ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಕರಕುಶಲ ಮಾರುಕಟ್ಟೆಯಲ್ಲಿ ಈ ವಿಶೇಷ ಕೊಲ್ಹಾಪುರಿ ಚಪ್ಪಲಿ ಮಾರಾಟವನ್ನು ಮಾಡಲಾಗುತ್ತಿದೆ. ಕೊಲ್ಹಾಪುರಿ ಚಪ್ಪಲಿ ಈಗ ವಿದೇಶಿಯ ಅತಿಥಿಗಳನ್ನು ಆಕರ್ಷಿಸುತ್ತಿದೆ.

ಕೊಲ್ಹಾಪುರಿ ಚಪ್ಪಲಿ ಉತ್ಪಾದಕರು ಮತ್ತು ವಿತರಕರಾದ ಭೋಪಾಲ್ ಶೇಟ್ ಮಾತನಾಡಿ, ಕೊಲ್ಹಾಪುರಿ ಚಪ್ಪಲಿಗಳಿಗೆ ದೇಶಾದ್ಯಂತ ಭಾರಿ ಬೇಡಿಕೆ ಇದೆ. ಆದರೆ ಪ್ರಸ್ತುತ ಚರ್ಮದ ಉದ್ಯಮ ತೊಂದರೆಯಲ್ಲಿದೆ. ಕುಶಲಕರ್ಮಿಗಳು ತಯಾರಿಸಿದ ಕೊಲ್ಹಾಪುರಿ ಚಪ್ಪಲಿ ಉತ್ಪಾದನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇರವಾಗಿ ನಿಗಮಗಳಿಂದ ಖರೀದಿಸಿ ವ್ಯವಹಾರವನ್ನು ಮತ್ತು ರಫ್ತುಅನ್ನು ಹೆಚ್ಚಿಸಬೇಕು. ಕೊಲ್ಹಾಪುರ ಜಿಲ್ಲೆಯ ಕುಶಲಕರ್ಮಿಗಳಿಗೆ ಅಗತ್ಯವಾದ ಉಪಕರಣಗಳಿಲ್ಲ, ಆದ್ದರಿಂದ ಹೊಸ ಆವಿಷ್ಕಾರಕರು ಇದರಲ್ಲಿ ನಡೆಯುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕುಶಲಕರ್ಮಿಗಳ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:73 ಘೋಷಣೆಗಳಿಗೆ ವಿಶ್ವನಾಯಕರ ಒಪ್ಪಿಗೆ: ದಾಖಲೆ ಬರೆದ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ

Last Updated : Sep 9, 2023, 7:27 PM IST

ABOUT THE AUTHOR

...view details