ಕರ್ನಾಟಕ

karnataka

ETV Bharat / bharat

ಕಾರ್ಮಿಕನಾಗಿ ಬೇರೆ ರಾಜ್ಯದಲ್ಲಿ ದುಡಿಯುವ ಚಿಕ್ಕಪ್ಪ... ಚಿಕ್ಕಮ್ಮನನ್ನೇ ಮದುವೆಯಾದ ಮಗ! - ಬಿಹಾರದ ಶಿಯೋಹರ್​​ ಜಿಲ್ಲೆಯ ಗ್ರಾಮ

ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರಾಮ್​ವಿನಯ್​ ಬೇರೆ ರಾಜ್ಯದಲ್ಲಿ ಉಳಿದುಕೊಂಡಿದ್ದನು. ಇದರ ಮಧ್ಯೆ ಸಂಬಂಧದಲ್ಲಿ ಮಗನಾಗಬೇಕಾಗಿದ್ದ ಯುವಕನೊಬ್ಬ ಚಿಕ್ಕಮ್ಮನೊಂದಿಗೆ ಮದುವೆ ಮಾಡಿಕೊಂಡಿದ್ದಾನೆ.

AUNT GOT MARRIED
AUNT GOT MARRIED

By

Published : Aug 4, 2021, 3:34 PM IST

ಶಿಯೋಹರ್​(ಬಿಹಾರ):ಎರಡು ವರ್ಷದ ಮಗುವಿನ ತಾಯಿಯೊಬ್ಬಳು ಸಂಬಂಧದಲ್ಲಿ ಮಗನಾಗಬೇಕಾಗಿರುವ ಯುವಕನೊಂದಿಗೆ ಮದುವೆಯಾಗಿರುವ ಘಟನೆ ನಡೆದಿದೆ. ಬಿಹಾರದ ಶಿಯೋಹರ್​​ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಅಪರೂಪದ ಪ್ರಕರಣ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.

ಕಳೆದ ಏಳು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಶೀಲಾ ದೇವಿಗೆ ಎರಡು ವರ್ಷದ ಮಗುವಿದೆ. ಈಕೆಯ ಗಂಡ ಕೆಲಸದ ನಿಮಿತ್ತ ಬೇರೆ ರಾಜ್ಯದಲ್ಲಿ ಉಳಿದುಕೊಂಡಿದ್ದಾನೆ. ವರ್ಷಕ್ಕೆ ಒಮ್ಮೆ ಅಥವಾ ಎರಡು ಸಲ ಬಂದು ಹೋಗುತ್ತಾನೆ.

ಇದರ ಮಧ್ಯೆ ಶೀಲಾದೇವಿ ವಾಸವಿದ್ದ ಮನೆಗೆ ಸಂಬಂಧದಲ್ಲಿ ಮಗನಾಗಬೇಕಾಗಿದ್ದ ಯುವಕ ಮೇಲಿಂದ ಮೇಲೆ ಬಂದು ಹೋಗಲು ಶುರುವಿಟ್ಟುಕೊಂಡಿದ್ದನು. ಇಬ್ಬರು ಒಟ್ಟಿಗೆ ಹೊರಗಡೆ ಹೋಗುತ್ತಿದ್ದರು. ಇವರ ವರ್ತನೆಯಿಂದ ಗ್ರಾಮಸ್ಥರು ರೋಸಿ ಹೋಗಿದ್ದರು.

ಕಳೆದ ಕೆಲ ದಿನಗಳ ಹಿಂದೆ ಮನೆಯಿಂದ ಇಬ್ಬರು ಕಾಣೆಯಾಗಿದ್ದರು. ಇದಾದ ಬಳಿಕ ಸೋಮವಾರ ರಾತ್ರಿ ಮನೆಗೆ ಹಿಂದುರುಗಿದ್ದಾರೆ. ಈ ವೇಳೆ ಗ್ರಾಮಸ್ಥರು ಸೇರಿಕೊಂಡು ಮದುವೆ ಮಾಡಿಸಲು ಮುಂದಾಗಿದ್ದಾರೆ. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ. ಗ್ರಾಮದಲ್ಲಿ ವಿದ್ಯುತ್​ ಇರಲಿಲ್ಲವಾದ್ದರಿಂದ ಜನರು ತಮ್ಮ ಮೊಬೈಲ್​ ಫೋನ್​ಗಳ ಬ್ಯಾಟರಿ ಸಹಾಯದಿಂದ ಮದುವೆ ಮಾಡಿಸಿದ್ದಾರೆ. ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಅಥವಾ ಮಹಿಳೆಯ ಗಂಡನಿಗೂ ಮಾಹಿತಿ ಗೊತ್ತಿಲ್ಲ.

ಇದನ್ನೂ ಓದಿರಿ: ಪದಕ ವಿಜೇತೆ ಲವ್ಲಿನಾ ಜೊತೆ ನಮೋ ಮಾತು..'ನಿಮ್ಮ ಗೆಲುವು ನಾರಿ ಶಕ್ತಿಯ ಪ್ರತಿಭೆ' ಎಂದ ಮೋದಿ!

ಕುಂಡಲ್​ ಗ್ರಾಮದ ರಾಮ್​​ವಿನಯ್​​ ಕಳೆದ ಏಳು ವರ್ಷಗಳ ಹಿಂದೆ ಶೀಲಾ ದೇವಿ ಅವರನ್ನ ಮದುವೆ ಮಾಡಿಕೊಂಡಿದ್ದರು. ಆದರೆ, ಆಕೆಯ ಗಂಡ ಬೇರೆ ರಾಜ್ಯದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಆತ ಮನೆಗೆ ಮೇಲಿಂದ ಮೇಲೆ ಬಾರದ ಕಾರಣ ಶೀಲಾದೇವಿ ಹಾಗೂ ಮತ್ತೊರ್ವ ಯುವಕನ ನಡುವೆ ಸಂಬಂಧ ಬೆಳೆದಿದ್ದು, ಇದೀಗ ಮದುವೆ ಮಾಡಿಕೊಂಡಿದ್ದಾರೆ.

ABOUT THE AUTHOR

...view details