ಕರ್ನಾಟಕ

karnataka

ETV Bharat / bharat

ಅತ್ತೆ-ಸೋದರಳಿಯನ ಪ್ರೀತಿಗೆ ಸಂಬಂಧಿಕರು ಅಡ್ಡಿ.. ಆತ್ಮಹತ್ಯೆಗೆ ಯತ್ನಿಸಿದ ಜೋಡಿ! - Madhyapradesh

ಅತ್ತೆ-ಸೋದರಳಿಯನ ನಡುವೆ ಮೂಡಿದ್ದ ಪ್ರೀತಿಗೆ ಕುಟುಂಬಸ್ಥರು ಅಡ್ಡಿ ಪಡಿಸಿದ ಪರಿಣಾಮ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನ
ಆತ್ಮಹತ್ಯೆಗೆ ಯತ್ನ

By

Published : Aug 28, 2021, 10:02 PM IST

Updated : Aug 28, 2021, 10:35 PM IST

ಸಿಧಿ(ಮಧ್ಯಪ್ರದೇಶ): ಅತ್ತೆ-ಸೋದರಳಿಯನ ನಡುವೆ ಮೂಡಿದ್ದ ಪ್ರೇಮಕ್ಕೆ ಕುಟುಂಬಸ್ಥರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 60 ಅಡಿ ಎತ್ತರದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಸಿಹವಾಲ್​ ತಹಸಿಲ್​ನಲ್ಲಿ ನಡೆದಿದೆ.

ಅತ್ತೆ-ಸೋದರಳಿಯನ ಪ್ರೀತಿಗೆ ಸಂಬಂಧಿಕರು ಅಡ್ಡಿ.. ಆತ್ಮಹತ್ಯೆಗೆ ಯತ್ನಿಸಿದ ಜೋಡಿ!

ಗೆರುವಾ ಹಳ್ಳಿ ನಿವಾಸಿಗಳಾದ ಇವರು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಸಂಬಂಧದ ಪ್ರತಿಫಲವಾಗಿ ಆಕೆ ಆರು ತಿಂಗಳ ಗರ್ಭಿಣಿಯಾದಳು. ಈ ವಿಷಯ ಇಬ್ಬರ ಕುಟುಂಬಸ್ಥರಿಗೂ ತಿಳಿದಿದ್ದು, ಮದುವೆಯಾಗಲು ಅನುಮತಿ ಕೊಟ್ಟಿರಲಿಲ್ಲ. ಅತ್ತೆ ಹಾಗೂ ಅಳಿಯನಿಗೆ ಕುಟುಂಬಸ್ಥರು ಎಷ್ಟೇ ಬುದ್ಧಿವಾದ ಹೇಳಿದರೂ, ಕೇಳಿರಲಿಲ್ಲ.

ಇದನ್ನೂ ಓದಿ: ಜಮೀನು ವಿವಾದಕ್ಕೆ ಒಂದೇ ಕುಟುಂಬದ ನಾಲ್ವರ ಕೊಲೆ: ಬೆಚ್ಚಿಬಿದ್ದ ಜಮಖಂಡಿ ಜನ

ಶುಕ್ರವಾರ ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಇಬ್ಬರೂ ಮನೆಬಿಟ್ಟು ಹೋಗಿದ್ದು, ಸೋನ್​ ನದಿಯ ಸೇತುವೆ ಮೇಲಿಂದ ಬಿದ್ದಿದ್ದಾರೆ. ಸ್ಥಳೀಯರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ನೋಡಿ ಪೊಲೀಸರಿಗೆ ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಇಬ್ಬರನ್ನೂ ಅಮೆಲಿಯಾದ ಆಸ್ಪತ್ರೆಗೆ ಸೇರಿಸಿದ್ದಾರೆ. ವಿಚಾರ ತಿಳಿದ ಎರಡೂ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಅವರ ಹೇಳಿಕೆ ಪಡೆದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Last Updated : Aug 28, 2021, 10:35 PM IST

ABOUT THE AUTHOR

...view details