ನವದೆಹಲಿ:ಆಗಸ್ಟ್ 14ರ ದಿನವನ್ನು ಇನ್ನು ಮುಂದೆ'ವಿಭಜನೆಯ ಭಯಾನಕ ನೆನಪಿನ ದಿನ' (Partition Horrors Remembrance Day)ವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಇಂದು ಘೋಷಿಸಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಅವರು ವಿಭಜನೆಯ ನೋವನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದು, ವಿಭಜನೆಯ ವೇಳೆ ದೇಶದ ಜನತೆ ಅನುಭವಿಸಿದ ಕಷ್ಟದ ಮತ್ತು ತ್ಯಾಗಗಳನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ವಿಭಜನೆಯ ನೋವನ್ನು ಮರೆಯಲು ಸಾಧ್ಯವಿಲ್ಲ, ಲಕ್ಷಾಂತರ ಮಂದಿ ಸಹೋದರ ಸಹೋದರಿಯರು ವಿಭಜನೆಯ ವೇಳೆ ಸ್ಥಳಾಂತರಗೊಂಡಿದ್ದಾರೆ. ದ್ವೇಷದ ಕಾರಣಕ್ಕೆ, ಹಿಂಸೆಗೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೋದಿ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಸ್ವಾತಂತ್ರ್ಯ ದಿನಕ್ಕೆ ಒಂದು ದಿನ ಮೊದಲು ಈ ಕುರಿತು ಮಾತನಾಡಿರುವ ಟ್ವೀಟ್ ಮಾಡಿರುವ ಅವರು, ಸಾಮಾಜಿಕ ವಿಭಜನೆ ಮತ್ತು ದ್ವೇಷದ ವಿಷವನ್ನು ತೆಗೆದುಹಾಕೋಣ, ಏಕತೆಯ ಸ್ಫೂರ್ತಿಯನ್ನು ಬಲಿಷ್ಠಗೊಳಿಸೋಣ ಎಂದು ರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ:ಭಾರತವನ್ನು ಹೊಗಳಿದ ತಾಲಿಬಾನ್, ಆದರೆ..?