ಹೈದರಾಬಾದ್: ಜನರಲ್ ಕೌನ್ಸಿಲ್ ಆಫ್ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಗುರ್ಪತವಂತ್ ಸಿಂಗ್ ಪನ್ನು ಪಂಜಾಬ್ ರಾಜ್ಯದ ಜನತೆಯ ಪರವಾಗಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ಆಡಿಯೊಗೆ ಖೂನ್ ದಾ ಬದ್ಲಾ ಖೂನ್ (ರಕ್ತದ ಪ್ರತೀಕಾರ ರಕ್ತದಿಂದ) ಎಂದು ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ 1955 ರಿಂದ 1984 ರ ಅವಧಿಯ ಗಾಂಧಿ-ನೆಹರು ಕುಟುಂಬದ ಆಡಳಿತವನ್ನು ನೆನಪಿಸಲಾಗಿದೆ.
ಎಸ್ಎಫ್ಜೆ ಜನರಲ್ ಕಾನ್ಸುಲ್ ಆಗಿರುವ ಗುರ್ಪತವಂತ್ ಸಿಂಗ್ ಪನ್ನು ಸಿಖ್ ಇತಿಹಾಸದ ಬಗ್ಗೆ ರಾಹುಲ್ ಗಾಂಧಿಯವರಿಗೆ ನೆನಪಿಸಿ ಕೊಟ್ಟಿದ್ದು, ದರ್ಬಾರ್ ಸಾಹಿಬ್ ಮೇಲೆ ದಾಳಿ ಮಾಡಿದವರ ವಂಶವನ್ನೇ ನಿರ್ನಾಮ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಮಾತ್ರ ಜೀವಂತವಿದ್ದಾರೆ ಎಂದು ಆಡಿಯೋ ಮೆಸೇಜ್ನಲ್ಲಿ ಹೇಳಲಾಗಿದೆ. ಕಾಶ್ಮೀರಿ ಹೋರಾಟಗಾರರ ನೆರವಿನಿಂದ ತಾವು ರಾಹುಲ್ ಗಾಂಧಿಯವರ ಅಮೃತಸರ್ನಿಂದ ಶ್ರೀನಗರದವರೆಗಿನ ಪ್ರಯಾಣವನ್ನು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ. ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸಲು ರಾಹುಲ್ ಗಾಂಧಿಗೆ ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ.
ಅಕಾಲಿ ದಳ ಬಾದಲ್ ಇದು ಭಾರತ ಸರ್ಕಾರದ ಪರ್ಯಾಯ ಮುಖವಾಗಿದ್ದು, ಅದರಲ್ಲಿನ ಶಿರೋಮಣಿ ಕಮೀಟಿಯ ಅಕಾಲ ತಖ್ತ್ ಜಥೇದಾರ್ ಅಧ್ಯಕ್ಷ ನಡೆದಾಡುವ ಶವವಾಗಿದ್ದಾರೆ ಎಂದು ಗುರ್ಪತವಂತ್ ಸಿಂಗ್ ಪನ್ನು ಆಡಿಯೋ ಮೆಸೇಜ್ನಲ್ಲಿ ತಿಳಿಸಿದ್ದಾರೆ. ಅಸ್ತ್ರಗಳಿಂದ ಖಲಿಸ್ತಾನವನ್ನು ಸಾಧಿಸಲು ಬಯಸುವ ಇತರ ಮತೀಯ ಸಂಘಟನೆಗಳು ರಾಹುಲ್ ಗಾಂಧಿಯನ್ನು ವಿರೋಧಿಸದಿರುವುದು ಎಲ್ಲರನ್ನೂ ಹೇಗೋ ಒಂದೇ ದಡದಲ್ಲಿ ನಿಲ್ಲುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಗಿಯಾನಿ ಹರ್‌ಪ್ರೀತ್ ಸಿಂಗ್ ಮತ್ತು ಹರ್ಜಿಂದರ್ ಸಿಂಗ್ ಧಾಮಿ ಅವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.