ಚಂಡೀಗಢ್( ಪಂಜಾಬ್) : ಪಂಜಾಬ್ನಲ್ಲಿ ಭಯೋತ್ಪಾದಕರು ರೂಪಿಸಿದ್ದ ಸಂಚನ್ನು ಪೊಲೀಸರು ಭಾನುವಾರ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಹನದಲ್ಲಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಆರ್ಡಿಎಕ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ ಐಇಡಿ ಟೈಮರ್, ಡಿಟೋನೇಟರ್ ಮತ್ತು ಬ್ಯಾಟರಿಯನ್ನು ಜಪ್ತಿ ಮಾಡಲಾಗಿದೆ.
ತರ್ನ್ ತರನ್ ಜಿಲ್ಲೆಯಲ್ಲಿ ಲೋಹದ ಕಪ್ಪು ಪೆಟ್ಟಿಗೆಯಲ್ಲಿ ಆರ್ಡಿಎಕ್ಸ್ ಪ್ಯಾಕ್ ಮಾಡಲಾಗಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲೋಹದ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿದ್ದ ಆರ್ಡಿಎಕ್ಸ್ನೊಂದಿಗೆ ಐಇಡಿ ಇತ್ತು. ಇದರ ತೂಕ 2.5 ಕೆ.ಜಿ. ಇದೆ. ಸುಬೋದಲ್ಲಿ ದೊಡ್ಡ ಸ್ಫೋಟ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ.