ಹೈದರಾಬಾದ್ :ತನ್ನ ಪತಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾಳೆ ಎಂಬ ಕಾರಣಕ್ಕಾಗಿ ಬಾಡಿಗೆಗೆ ಇದ್ದ ಯುವತಿಯ ಮೇಲೆ ಮಹಿಳೆಯೊಬ್ಬಳು ನಾಲ್ವರು ಯುವಕರಿಂದ ಹಲ್ಲೆ ನಡೆಸಿದ್ದಲ್ಲದೇ, ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಘಟನೆ ಏನು?:ಕೊಂಡಾಪುರ ನಿವಾಸಿಯಾದ ಶ್ರೀಕಾಂತ್ ಎಂಬುವರ ಮನೆಯಲ್ಲಿ ಸಂತ್ರಸ್ತೆ ಬಾಡಿಗೆಗೆ ಇದ್ದಳು. ಮನೆ ಮಾಲೀಕ ಶ್ರೀಕಾಂತ್ ಮತ್ತು ಯುವತಿ ಸಿವಿಲ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಪರೀಕ್ಷೆಯ ಕುರಿತಾಗಿ ಒಟ್ಟಾಗಿ ಚರ್ಚಿಸುತ್ತಿದ್ದರು.
ಇದು ಶ್ರೀಕಾಂತ್ ಪತ್ನಿಗೆ ಇರುಸುಮುರುಸು ಉಂಟು ಮಾಡಿತ್ತು. ಇದರಿಂದ ಗಂಡನ ಮೇಲೆಯೇ ಅನುಮಾನಗೊಂಡ ಆಕೆ ಈ ಕುರಿತು ತಗಾದೆ ತೆಗೆಯುತ್ತಿದ್ದಳು. ಈ ಬಗ್ಗೆ ಶ್ರೀಕಾಂತ್ ಸ್ಪಷ್ಟನೆ ನೀಡಿದ್ದರೂ ಕೇಳದ ಆಕೆ ಆತನೊಂದಿಗೆ ಜಗಳವಾಡುತ್ತಿದ್ದಳು.
ಆರೋಗ್ಯ ಸರಿಯಿಲ್ಲ ಎಂದು ಕರೆಸಿ ದೌರ್ಜನ್ಯ :ಯುವತಿಯನ್ನು ಮನೆ ಬಿಟ್ಟು ಓಡಿಸಬೇಕು ಎಂದು ಯೋಜಿಸಿದ ಮಹಿಳೆ ಆಕೆಯ ಮೇಲೆ ಹಲ್ಲೆಗೆ ಸ್ಕೆಚ್ ಹಾಕಿದ್ದಾಳೆ. ಇದಕ್ಕಾಗಿ ನಾಲ್ವರು ಯುವಕರನ್ನು ಹಣ ನೀಡಿ ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ತನಗೆ ಆರೋಗ್ಯ ಸರಿಯಿಲ್ಲ ಎಂದು ನಾಟಕವಾಡಿ ಯುವತಿಯನ್ನೂ ಮನೆಗೆ ಕರೆಸಿಕೊಂಡ ಬಳಿಕ ರೂಮಿಗೆ ಕರೆದೊಯ್ದು, ಯುವಕರಿಂದ ಆಕೆಯ ಮೇಲೆ ಹಲ್ಲೆ ಮಾಡಿಸಿದ್ದಾರೆ.
ಬಳಿಕ ಆ ನಾಲ್ವರು ಯುವಕರಿಂದ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾಳೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಡಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಕೆಯ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಡೆದ ಘಟನೆಯ ಬಗ್ಗೆ ಯುವತಿ ಹೇಳಿಕೊಂಡ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆ ಹಾಗೂ ಹಲ್ಲೆ ಮಾಡಿದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.
ಓದಿ:ನಿದ್ರಾಹೀನತೆ ಸಮಸ್ಯೆಗೆ ಯುಎಸ್‌ನಲ್ಲಿ ಗಾಂಜಾ ಸೇವಿಸುತ್ತಿದ್ದೆ ಅಷ್ಟೇ.. NCBಗೆ ಆರ್ಯನ್ ಖಾನ್ ಹೇಳಿಕೆ