ಜೈಪುರ (ರಾಜಸ್ಥಾನ) :ದೇಶದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪುಟ್ಟ ಹೆಣ್ಣು ಮಕ್ಕಳ ಮೇಲೂ ಬಲಾತ್ಕಾರಗಳು ನಡೆಯುತ್ತಿವೆ. ಆದರೆ, ಇಲ್ಲೊಬ್ಬ ಎಂಟು ವರ್ಷದ ಬಾಲಕಿ ಕಾಮುಕನ ಕೈಯಿಂದ ತನ್ನನ್ನು ತಾನು ರಕ್ಷಿಸಿಕೊಂಡು ಸಾಹಸ ಮೆರೆದಿದ್ದಾಳೆ.
ಬಾಲಕಿಯ ಧೈರ್ಯ ಕಂಡು ಕಾಮುಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ತನ್ನ ಮೇಲೆ ಅತ್ಯಾಚಾರ ಎಸಗಿದ ಕಾಮುಕನ ಮುಖ ಮತ್ತು ಕೈಗಳಿಗೆ ಕಚ್ಚಿ, ಉಗುರುಗಳಿಂದ ಪರಚಿ ಅವನನ್ನು ಬಾಲಕಿ ಓಡಿಸಿದ್ದಾಳೆ. ರಾಜಸ್ಥಾನದ ರಾಜಧಾನಿಯ ಜೈಪುರದ ಬಾಲಕಿಯೇ ಈ ಧೈರ್ಯ ಶಾಲಿಯಾಗಿದ್ದಾಳೆ.
ಇಷ್ಟಕ್ಕೂ ನಡೆದಿದ್ದೇನು?: ಪ್ರತಾಪ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ವರ್ಷದ ಬಾಲಕಿಯೊಬ್ಬಳು ಶುಕ್ರವಾರ ಸಂಜೆ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಳು. ಆಗ ಪಕ್ಕದ ಮನೆಯ ಗೋವರ್ಧನ್ ಎಂಬ ಕಾಮುಕ ಬಾಲಕಿಗೆ ಏನೋ ಆಮಿಷವೊಡ್ಡಿ ತನ್ನ ಬಳಿಗೆ ಕರೆದಿದ್ದಾನೆ. ಬಳಿಕ ಬಲವಂತವಾಗಿ ಮನೆಗೆ ಎತ್ತಿಕೊಂಡು ಹೋಗಿ ಬಲಾತ್ಕಾರಕ್ಕೆ ಮುಂದಾಗಿದ್ದಾನೆ. ಆಗ ಬಾಲಕಿ ಕೂಡಲೇ ಕಿರುಚಾಡಿದ್ದಾಳೆ.