ಕರ್ನಾಟಕ

karnataka

ETV Bharat / bharat

ಮೊಬೈಲ್​ ಶೋರೂಂ​​ನಲ್ಲಿ ಅಸಭ್ಯ ವರ್ತನೆ: ಒಂದನೇ ಮಹಡಿಯಿಂದ ಜಿಗಿದ ಯುವತಿ - ಮೊಬೈಲ್​ ಶೋರೂಮ್​​ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ

ಮೊಬೈಲ್​ ಶೋರೂಮ್​​ವೊಂದರಲ್ಲಿ ಕೆಲಸ ಮಾಡ್ತಿದ್ದ ಯುವತಿಯೋರ್ವಳ ಮೇಲೆ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದು, ಆತನಿಂದ ರಕ್ಷಣೆ ಮಾಡಿಕೊಳ್ಳಲು ಒಂದನೇ ಮಹಡಿಯಿಂದ ಕೆಳಗೆ ಜಿಗಿದಿರುವ ಘಟನೆ ನಡೆದಿದೆ.

Attempt to misbehavior with a girl
Attempt to misbehavior with a girl

By

Published : Apr 28, 2022, 7:45 PM IST

Updated : Apr 29, 2022, 2:43 PM IST

ಲೂಧಿಯಾನ್​(ಪಂಜಾಬ್​):ಮೊಬೈಲ್​ ಕಂಪನಿವೊಂದರ ಶೋರೂಮ್​​ನಲ್ಲಿ ಕೆಲಸ ಮಾಡ್ತಿದ್ದ ಯುವತಿಯೋರ್ವಳೊಂದಿಗೆ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ಪಂಜಾಬ್​​ನ ಲೂಧಿಯಾನ್​​ದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಲೂಧಿಯಾನ್​ದ ಜಮಾಲ್​ಪುರ್​ 33 ರಸ್ತೆಯಲ್ಲಿರುವ ಮೊಬೈಲ್ ಕಂಪನಿ ಶೋರೂಮ್​​ನಲ್ಲಿ ಈ ಘಟನೆ ನಡೆದಿದೆ.

ಮೊಬೈಲ್​ ಶೋರೂಮ್​​ ಯುವತಿ ಕೆಲಸ ಮಾಡ್ತಿದ್ದ ವೇಳೆ ಅಲ್ಲಿಗೆ ಬಂದಿರುವ ಯುವಕ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ. ಈ ವೇಳೆ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಮೊದಲ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದು, ಸಿವಿಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೊಬೈಲ್​ ಶೋರೂಂ​​ನಲ್ಲಿ ಅಸಭ್ಯ ವರ್ತನೆ: ಒಂದನೇ ಮಹಡಿಯಿಂದ ಜಿಗಿದ ಯುವತಿ

ಘಟನೆಗೆ ಸಂಬಂಧಿಸಿದಂತೆ ಬಾಲಕಿ ಪೋಷಕರು ಪ್ರಕರಣ ದಾಖಲು ಮಾಡಿದ್ದಾರೆ. ದೂರಿನಲ್ಲಿ ತಮ್ಮ ಮಗಳೊಂದಿಗೆ ಯುವಕ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರವೆಸಗಲು ಯತ್ನಿಸಿದ್ದಾನೆಂದು ದೂರಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿರುವ ಬಗ್ಗೆ ಪೊಲೀಸರು ದೃಢಪಡಿಸಿಲ್ಲವಾದ್ರೂ, ಯುವತಿ ಮನೆಯವರ ಹೇಳಿಕೆ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಗೋಸ್ಕರ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ:ವಿಚ್ಛೇದಿತ ಪತ್ನಿ, ಪುತ್ರಿಗೆ ಗುಂಡಿಕ್ಕಿ ವ್ಯಕ್ತಿ ಆತ್ಮಹತ್ಯೆ! 13 ಸೆಕೆಂಡ್‌ನಲ್ಲಿ ಮೂವರ ಕೊಲೆ! ಸಿಸಿಟಿವಿಯಲ್ಲಿ ಭಯಾನಕ ದೃಶ್ಯ!

ಆರೋಪಿಯನ್ನg ಪ್ರಶಾಂತ್​ ಅಲಿಯಾಸ್ ಪಿಂಟು ಎಂದು ಗುರುತಿಸಲಾಗಿದ್ದು, ಯುವತಿ ಕೆಲಸ ಮಾಡ್ತಿದ್ದ ಶೋರೂಮ್​​ಗೆ ಸಿಮ್ ನೀಡಲು ಆಗಮಿಸಿದ್ದನು. ಈ ವೇಳೆ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ.

Last Updated : Apr 29, 2022, 2:43 PM IST

ABOUT THE AUTHOR

...view details