ಕರ್ನಾಟಕ

karnataka

ETV Bharat / bharat

ಸಿಮೆಂಟ್​ ಪಿಲ್ಲರ್​ಗೆ ಡಿಕ್ಕಿ ಹೊಡೆದ ಮುಂಬೈ-ದೆಹಲಿ ರಾಜಧಾನಿ ಎಕ್ಸ್​ಪ್ರೆಸ್​.. ತಪ್ಪಿತು ದೊಡ್ಡ ದುರಂತ - ಸಿಮೆಂಟ್​​ ಪಿಲ್ಲರ್​ಗೆ ರೈಲು ಡಿಕ್ಕಿ

Train accident in Valsad : ಸಾವಿರಾರು ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ಮುಂಬೈ-ದೆಹಲಿ ರಾಜಧಾನಿ ಎಕ್ಸ್​ಪ್ರೆಸ್ ಗುಜರಾತ್​ನ ವಲ್ಸಾದ್​ ಬಳಿ ಸಿಮೆಂಟ್​​ ಪಿಲ್ಲರ್​ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ..

Train accident in Valsad
Train accident in Valsad

By

Published : Jan 15, 2022, 6:19 PM IST

ವಲ್ಸಾದ್​​(ಗುಜರಾತ್​) :ಕಳೆದ ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು ಅಪಘಾತ ಸಂಭವಿಸಿ 9 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಭಾರಿ ಅನಾಹುತ ತಪ್ಪಿದಂತಾಗಿದೆ. ಮುಂಬೈ-ದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ರೈಲು ದಕ್ಷಿಣ ಗುಜರಾತ್​ನ ವಲ್ಸಾದ್​ ಬಳಿ ಸಿಮೆಂಟ್​​ ಪಿಲ್ಲರ್​ಗೆ ಡಿಕ್ಕಿ ಹೊಡೆದಿದೆ.

ಘಟನೆ ನಡೆದ ಸ್ಥಳದಲ್ಲಿ ಪೊಲೀಸರಿಂದ ಶೋಧ ಕಾರ್ಯ

ಕೆಲ ದುಷ್ಕರ್ಮಿಗಳು ಸಿಮೆಂಟ್​ ಪಿಲ್ಲರ್‌ನ ರೈಲ್ವೆ ಹಳಿ ಮೇಲೆ ಹಾಕಿರುವುದರಿಂದ ಈ ಘಟನೆ ನಡೆದಿದೆ. ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 7:10ರ ವೇಳೆಗೆ ಈ ಘಟನೆ ನಡೆದಿದೆ.

ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ರೈಲನ್ನು ಹಳಿ ತಪ್ಪಿಸುವ ಉದ್ದೇಶದಿಂದ ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಲೊಕೊ ಪೈಲಟ್​ ಅತುಲ್ ತಕ್ಷಣವೇರೈಲ್ವೆ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ:ಎಚ್ಚರ..! ಸಮುದಾಯಕ್ಕೆ ಹರಡಿದೆ ಕೋವಿಡ್​​ ರೂಪಾಂತರಿ ಒಮಿಕ್ರಾನ್ : ಅಧ್ಯಯನದಿಂದ ಬಹಿರಂಗ

ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಡಿವೈಎಸ್ಪಿ ಮನೋಜ್​​ ಚಾವ್ಡಾ, ಕೆಲ ದುಷ್ಕರ್ಮಿಗಳು ರೈಲ್ವೆ ಹಳಿ ಮೇಲೆ ಸಿಮೆಂಟ್​ ಕಂಬ ಹಾಕಿದ್ದರಿಂದ ಈ ಘಟನೆ ನಡೆದಿದೆ.

ಆದರೆ, ರೈಲಿನ ವೇಗಕ್ಕೆ ಸಿಮೆಂಟ್ ಪಿಲ್ಲರ್​ ಮುರಿದು ಹೋಗಿದ್ದು, ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನ ಬಿಡಲ್ಲ ಎಂದಿರುವ ಅವರು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details