ಕರ್ನಾಟಕ

karnataka

ETV Bharat / bharat

ಟಿಡಿಪಿ, ವೈಎಸ್​ಆರ್​ಸಿ ದ್ವೇಷದ ರಾಜಕಾರಣ: ಇಂದು ಆಂಧ್ರಪ್ರದೇಶ ಬಂದ್​! - ಆಂಧ್ರದಲ್ಲಿ ದ್ವೇಷದ ರಾಜಕಾರಣ

ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಲ್ಲಿರುವ ಟಿಡಿಪಿ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Attacks on TDP office
Attacks on TDP office

By

Published : Oct 19, 2021, 9:17 PM IST

Updated : Oct 20, 2021, 5:04 AM IST

ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ದ್ವೇಷದ ರಾಜಕೀಯ ಆರಂಭಗೊಂಡಿದ್ದು, ಆಡಳಿತ ಪಕ್ಷ ವೈಎಸ್​​ಆರ್​​ ಕಾಂಗ್ರೆಸ್​​​ ರಾಜ್ಯದ ವಿವಿಧ ನಗರದಲ್ಲಿರುವ ಟಿಡಿಪಿ ಕಚೇರಿಗಳ ಮೇಲೆ ಹಲ್ಲೆ ಮಾಡಿ ಧ್ವಂಸ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಮುಖವಾಗಿ ಆಂಧ್ರಪ್ರದೇಶದ ಗುಂಟೂರು, ವಿಜಯವಾಡ, ಮಂಗಳಗಿರಿ ಸೇರಿದಂತೆ ಅನೇಕ ಜಿಲ್ಲೆಯ ಟಿಡಿಪಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಘಟನೆ ವೇಳೆ ಪಕ್ಷದ ವಕ್ತಾರ ಪಟ್ಟಾಭಿ ರಾಮ್​ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.

ಆಂಧ್ರದಲ್ಲಿ ಟಿಡಿಪಿ ಕಚೇರಿಗಳ ಮೇಲೆ ದಾಳಿ

ಸುದ್ದಿಗೋಷ್ಠಿ ನಡೆಸಿದ ಚಂದ್ರಬಾಬು ನಾಯ್ಡು

ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ವೈಎಸ್​ಆರ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಟಿಡಿಪಿ ಪ್ರಧಾನ ಕಚೇರಿ ಮೇಳೆ ದಾಳಿ ನಡೆಸಿದಿರುವುದ ನಿಜಕ್ಕೂ ಆಘಾತಕಾರಿ. ಸಿಎಂ ಜಗನ್​ ಆಮಿಷವೊಡ್ಡಿ ಇಂತಹ ಕೆಲಸ ಮಾಡಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಟಿಡಿಪಿ ಕಚೇರಿಗಳ ಮೇಲೆ ದಾಳಿ ನಡೆಯುತ್ತಿದ್ದರೂ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Attacks on TDP office

ಇಂತಹ ದಾಳಿಗಳು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗಳು. ಇದೇ ವಿಚಾರವಾಗಿ ನಾವು ಬುಧವಾರ ಆಂಧ್ರಪ್ರದೇಶ ಬಂದ್​ಗೆ ಕರೆ ನೀಡಿದ್ದೇವೆ. ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿರುವ ಶಕ್ತಿಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದು ಚಂದ್ರಬಾಬು ನಾಯ್ಡು ಕರೆ ನೀಡಿದರು.

Attacks on TDP office
Last Updated : Oct 20, 2021, 5:04 AM IST

ABOUT THE AUTHOR

...view details