ಹೈದರಾಬಾದ್:ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ತಾರೆಮ್ ಪ್ರದೇಶದಲ್ಲಿ ಶನಿವಾರ ನಕ್ಸಲರು-ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ಯೋಧರು ಹುತಾತ್ಮರಾಗಿದ್ದರೆ, 9 ಮಂದಿ ನಕ್ಸಲರು ಹತರಾಗಿದ್ದಾರೆ. ನಕ್ಸಲರ ಬಹುತೇಕ ದಾಳಿಗಳು ಬೇಸಿಗೆ ಸಮಯದಲ್ಲೇ ನಡೆಯುತ್ತವೆ ಎಂಬುದು ತಿಳಿದುಬಂದಿದೆ.
ಬೇಸಿಗೆಯ ತಿಂಗಳಲ್ಲೇ ಹೆಚ್ಚಾಗಿ ನಕ್ಸಲರ ದಾಳಿ:
ಬೇಸಿಗೆಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿರಲು ಕಾರಣ ಶುಷ್ಕ (ಒಣ) ಹವಾಮಾನ. ಶುಷ್ಕ ಹವಾಮಾನವು ವಿಶಾಲವಾದ ಕಾಡಿನಲ್ಲೂ ದಾಳಿಗೆ ಹೊಂಚು ಹಾಕಲು ಸಹಾಯಕಾರಿಯಾಗಿದೆ. ಅಲ್ಲದೆ, ಬಂಡುಕೋರರು ಬೇಸಿಗೆಯನ್ನು ವಾರ್ಷಿಕ ಟ್ಯಾಕ್ಟಿಕಲ್ ಕೌಂಟರ್ ಅಪರಾಧ ಅಭಿಯಾನ (ಟಿಸಿಒಸಿ) ಕ್ಕೆ ಸೂಕ್ತ ಅವಧಿಯೆಂದು ಪರಿಗಣಿಸುತ್ತಾರೆ.