ಕರ್ನಾಟಕ

karnataka

ETV Bharat / bharat

ಎಸ್​ಹೆಚ್​ಒ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು - ಸಿಂಘು ಇತ್ತೀಚಿನ ಸುದ್ದಿ

ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾಕಾರರು ಆರೋಗ್ಯ ಮತ್ತು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

farmer protest
ದೆಹಲಿ ಪ್ರತಿಭಟನಾಕಾರರು

By

Published : Feb 17, 2021, 12:49 PM IST

ನವದೆಹಲಿ: ಕೃಷಿ ಕಾನೂನುಗಳ ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಇನ್ನು ಪ್ರತಿಭಟನಾಕಾರರು, ದೆಹಲಿಯ ಆರೋಗ್ಯ ಮತ್ತು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಾಹಿತಿಯ ಪ್ರಕಾರ, ಪ್ರತಿಭಟನಾಕಾರರು ಸಿಬ್ಬಂದಿ ಸಮಯ್ ಪುರ್ ಬದ್ಲಿ ಆಶಿಶ್ ದುಬೆ ಕಾರನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ, ಕಾರು ನಿಲ್ಲಿಸಿದಾಗ ಅವರ ಮೇಲೆ ಕತ್ತಿಯಿಂದ ದಾಳಿ ನಡೆಸಿದ್ದಾರೆ. ಬಳಿಕ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರಗೆ ದಾಖಲಿಸಲಾಗಿದೆ. ಇನ್ನು ದಾಳಿ ನಡೆಸಿದವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಹರ್ಪ್ರೀತ್ ಸಿಂಗ್ ಎಂಬ ಪ್ರತಿಭಟನಾಕಾರನ ಮೇಲೆ ದರೋಡೆ ಮತ್ತು ಕೊಲೆ ಯತ್ನದ ಸೆಕ್ಷನ್ ಅಡಿ ಕೇಸು ದಾಖಲಿಸಲಾಗಿದೆ.

ABOUT THE AUTHOR

...view details