ಝಾನ್ಸಿ: ಪಿಯುಸಿ ವಿದ್ಯಾರ್ಥಿನಿಯೊಬ್ಬರ ಮೇಲೆ ಯುವಕನೊಬ್ಬ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇಲ್ಲಿನ ಮಿಷನ್ ಕ್ರಾಸ್ ರೋಡ್ನಲ್ಲಿ ಘಟನೆ ನಡೆದಿದ್ದು, ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಥಳೀಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಚಿಂತಾಜನಕ ಆಗಿರುವುದರಿಂದ ವೈದ್ಯರು ಅವರನ್ನು ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ. ಗಾಯಾಳು ವಿದ್ಯಾರ್ಥಿನಿಗೆ ವೈದ್ಯರು 31 ಹೊಲಿಗೆಗಳನ್ನು ಹಾಕಿದ್ದಾರೆ.
ಇದೇ ವೇಳೆ, ಬಾಲಕಿಯ ಮನೆಯವರಿಂದ ಘಟನೆಯ ಮಾಹಿತಿ ಪಡೆದ ಪೊಲೀಸರು, ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಆರೋಪಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿಯು ಗ್ವಾಲಿಯರ್ ರಸ್ತೆ ನಿವಾಸಿಯಾಗಿದ್ದು, ಸಂಜೆ ಎಂದಿನಂತೆ ಮಿಷನ್ ಕಾಂಪೌಂಡ್ ಬಳಿ ಇಂಗ್ಲಿಷ್ ಕೋಚಿಂಗ್ ಕ್ಲಾಸಿಗೆ ಹೋಗುತ್ತಿದ್ದರು. ದಾರಿಯಲ್ಲಿ ನಿಂತಿದ್ದ ದುಷ್ಕರ್ಮಿ ದಾನಿಶ್ ಖಾನ್ ಆಕೆಯ ಕುತ್ತಿಗೆಗೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾರೆ. ಬಾಲಕಿಯೊಬ್ಬಳು ಮಧ್ಯ ಪ್ರವೇಶಿಸಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.