ಲಖನೌ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಲಖನೌದಲ್ಲಿರುವ ಕಾಕೋರಿಯ ರಿಂಗ್ ರಸ್ತೆಯ ಬಳಿಯ ದುಬಗ್ಗ ಪ್ರದೇಶದಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿ, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಬ್ಬರು ಶಂಕಿತ ಅಲ್ ಖೈದಾ ಉಗ್ರರ ಸೆರೆ - ಶಂಕಿತ ಉಗ್ರನಿಗಾಗಿ ಶೋಧ
ಉತ್ತರ ಪ್ರದೇಶದ ಲಖನೌದಲ್ಲಿರುವ ಕಾಕೋರಿಯ ರಿಂಗ್ ರೋಡ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿದ ಎಟಿಎಸ್ ತಂಡ ಇಬ್ಬರು ಶಂಕಿತ ಅಲ್ಖೈದಾ ಉಗ್ರರನ್ನು ಸೆರೆ ಹಿಡಿದಿದೆ.
ಉತ್ತರ ಪ್ರದೇಶದಲ್ಲಿ ಇಬ್ಬರು ಶಂಕಿತ ಅಲ್-ಖೈದಾ ಉಗ್ರರ ಸೆರೆ
ಶಂಕೆಯ ಮೇರೆಗೆ ಕಾಕೋರಿಯ ರಿಂಗ್ ರೋಡ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿದ ಎಟಿಎಸ್ ತಂಡ ಇಬ್ಬರು ಶಂಕಿತ ಉಗ್ರರನ್ನು ಸೆರೆ ಹಿಡಿದಿದ್ದಾರೆ. ಬಂಧಿತರಿಗೆ ಅಲ್-ಖೈದಾ ಉಗ್ರ ಸಂಘಟನೆಯ ಜತೆ ಸಂಪರ್ಕವಿದೆ ಎಂದು ಶಂಕಿಸಲಾಗಿರುವ ಕುರಿತು ಮೂಲಗಳು ತಿಳಿಸಿವೆ.
ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಎರಡು ಪ್ರೆಶರ್-ಕುಕ್ಕರ್ ಬಾಂಬ್‌ಗಳು, ಅರೆ ತಯಾರಿಸಿದ ಟೈಮ್ ಬಾಂಬ್ ಮತ್ತು ಆರರಿಂದ ಏಳು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.
Last Updated : Jul 11, 2021, 4:08 PM IST