ಕರ್ನಾಟಕ

karnataka

ETV Bharat / bharat

ATM ಹಣ ವಿತ್​​ ಡ್ರಾ ಶುಲ್ಕ​ ಹೆಚ್ಚಿಸಿದ ಆರ್​ಬಿಐ: ಆಗಸ್ಟ್‌ 1ರಿಂದ ನೂತನ ನಿಯಮ​ ಜಾರಿ

New RBI rules: ಮುಂದಿನ ತಿಂಗಳಿಂದ ಎಟಿಎಂಗಳಲ್ಲಿ ಹಣ ವಿತ್​ ಡ್ರಾ ಮೇಲಿನ ಚಾರ್ಜ್​ ಹೆಚ್ಚಿಗೆ ಮಾಡಿ ಭಾರತೀಯ ರಿಸರ್ವ್‌ ಬ್ಯಾಂಕ್​​ ಆದೇಶ ಹೊರಹಾಕಿದೆ.

ATM Cash Withdrawal
ATM Cash Withdrawal

By

Published : Jul 23, 2021, 7:05 PM IST

ನವದೆಹಲಿ:ಮಹಾಮಾರಿ ಕೊರೊನಾ ವೈರಸ್​​ ಸೋಂಕಿಗೊಳಗಾಗಿ ತೊಂದರೆ ಅನುಭವಿಸುತ್ತಿರುವ ಜನರಿಗೆ ಭಾರತೀಯ ರಿಜರ್ವ್​ ಬ್ಯಾಂಕ್(RBI) ಮತ್ತೊಂದು ಶಾಕ್​ ನೀಡಿದೆ. ಮುಂದಿನ ತಿಂಗಳಿಂದ ಎಟಿಎಂ ಹಣ ವಿತ್​ ಡ್ರಾ ಮೇಲಿನ ಚಾರ್ಜ್​ ಏರಿಕೆ ಮಾಡಿದೆ. ಆಗಸ್ಟ್​ 1ರಿಂದಲೇ ಈ ಹೊಸ ನೀತಿ ಜಾರಿಗೊಳ್ಳಲಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಆಗಸ್ಟ್​​​ 1ರಿಂದ ಇತರೆ ಎಟಿಎಂಗಳಲ್ಲಿ 5ಕ್ಕಿಂತಲೂ ಹೆಚ್ಚಿನ ಸಲ ಹಣ ಡ್ರಾ ಮಾಡಿದರೆ ಪ್ರತಿ ಹಿಂತೆಗೆತಕ್ಕೆ 21 ರೂ. ಚಾರ್ಜ್ ಮಾಡಲಾಗುತ್ತಿದೆ. ಈ ಹಿಂದೆ 20 ರೂ. ಚಾರ್ಜ್​ ಮಾಡಲಾಗುತ್ತಿತ್ತು. ಇದರ ಜತೆಗೆ ಆರ್​ಬಿಐ ಹಣಕಾಸೇತರ ಶುಲ್ಕವನ್ನು 5 ರೂಪಾಯಿಯಿಂದ 6 ರೂ.ಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಇಂಟರ್​ ಚೇಂಜ್​ ಶುಲ್ಕವನ್ನು 17 ರೂಪಾಯಿಗೆ ಏರಿಕೆ ಮಾಡಿದೆ. ಈ ಹಿಂದೆ 16 ರೂ. ಇತ್ತು.

ಇದನ್ನೂ ಓದಿ: ಸ್ಪರ್ಧಾ ಕಾಯ್ದೆ ಉಲ್ಲಂಘನೆ: ಅಮೆಜಾನ್-ಫ್ಲಿಪ್​ಕಾರ್ಟ್​​ ಮೇಲ್ಮನವಿ ವಜಾ

ಇದಲ್ಲದೆ, ಗ್ರಾಹಕರು ಇತರೆ ಬ್ಯಾಂಕ್​ಗಳ ಎಟಿಎಂಗಳಿಂದ ಉಚಿತವಾಗಿ ವಹಿವಾಟು ನಡೆಸಬೇಕಾಗಿದ್ದು, ಮೆಟ್ರೋ ಕೇಂದ್ರಗಳಲ್ಲಿ 3 ಹಾಗೂ ಇತರೆ ಪ್ರದೇಶಗಳಲ್ಲಿ 5 ಸಹ ಹಣ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಇದಾದ ಬಳಿಕ ಪ್ರತಿ ವಹಿವಾಟಿನ ಮೇಲೆ 20 ರೂ. ದಂಡ ವಿಧಿಸಲಾಗುತ್ತದೆ. ಜೂನ್​ 2019ರ ಆರ್​ಬಿಐ ಸ್ಥಾಪನೆ ಮಾಡಿರುವ ಸಮಿತಿಯ ಸಲಹೆ ಆಧಾರದ ಮೇಲೆ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details