ಕರ್ನಾಟಕ

karnataka

ETV Bharat / bharat

ನಿರ್ವಹಣೆ ಕಾರ್ಯ ಹಿನ್ನೆಲೆ ಒಂದು ಗಂಟೆ ಅಟಲ್ ಸುರಂಗ ಬಂದ್​ - ಅಟಲ್ ಸುರಂಗ

ಡಿ25, 2019 ರಂದು ರೋಲ್ಟಾಂಗ್ ಸುರಂಗವನ್ನು ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗಾಗಿ ಅಟಲ್ ಟನಲ್ ಎಂದು ಮರು ನಾಮಕರಣ ಮಾಡಲಾಯಿತು. ಈ ಸುರಂಗ ನಿರ್ಮಾಣದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿ.ಮೀ. ಅಂತರ ಕಡಿಮೆಯಾಗಿದೆ..

ಅಟಲ್ ಸುರಂಗ ಬಂದ್​
ಅಟಲ್ ಸುರಂಗ ಬಂದ್​

By

Published : Dec 26, 2020, 11:47 AM IST

ಮನಾಲಿ: ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ಸಂಪರ್ಕಿಸುವ ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ನಿರ್ವಹಣೆ ಕಾರ್ಯದ ಹಿನ್ನೆಲೆ ಇಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12ರವರೆಗೆ ಮುಚ್ಚಲಾಗುವುದು ಎಂದು ಲಾಹೌಲ್ ಸ್ಪಿತಿ ಪೊಲೀಸರು ತಿಳಿಸಿದ್ದಾರೆ.

ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದ್ದು, 9.02 ಕಿ.ಮೀ ಉದ್ದ ಹೊಂದಿದೆ. ಅಟಲ್ ಸುರಂಗದ ದಕ್ಷಿಣದ ಹೆಬ್ಬಾಗಿಲು ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿದೆ. ಸುರಂಗದ ಉತ್ತರದ ಹೆಬ್ಬಾಗಿಲು ಲಾಹೌಲ್ ಕಣಿವೆಯ ಸಿಸ್ಸು ಎಂಬ ಹಳ್ಳಿಯ ಟೆಲ್ಲಿಂಗ್ ಬಳಿ ಇದ್ದು, ಇದು 3,071 ಮೀಟರ್ ಎತ್ತರದಲ್ಲಿದೆ.

ಡಿಸೆಂಬರ್ 25, 2019 ರಂದು ರೋಲ್ಟಾಂಗ್ ಸುರಂಗವನ್ನು ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗಾಗಿ ಅಟಲ್ ಟನಲ್ ಎಂದು ಮರು ನಾಮಕರಣ ಮಾಡಲಾಯಿತು. ಈ ಸುರಂಗ ನಿರ್ಮಾಣದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿಲೋಮೀಟರ್ ಅಂತರ ಕಡಿಮೆಯಾಗಿದೆ. ಜೊತೆಗೆ ನಾಲ್ಕರಿಂದ ಐದು ಗಂಟೆಗಳವರೆಗೆ ಪ್ರಯಾಣದ ಸಮಯ ಉಳಿತಾಯವಾಗಿದೆ.

ABOUT THE AUTHOR

...view details