ಕೊಲ್ಲಂ (ಕೇರಳ):'ಕೊಲ್ಲಂ ಜಿಲ್ಲೆಯ ಪ್ರಮುಖ ಚವರ ಕೋಟಂಕುಲಂಗರ ದೇವಿ ದೇವಸ್ಥಾನವು ಕೇರಳದ ವನದುರ್ಗದ ಪವಿತ್ರ ಪುರಾತನ ದೇವಾಲಯ. ಈ ದೇವಸ್ಥಾನದಲ್ಲಿ ಪುರುಷರು ಸ್ತ್ರೀ ರೂಪ ಧರಿಸಿ ಹಬ್ಬಯೊಂದನ್ನು ವಿಶೇಷವಾಗಿ ಆಚರಿಸುವುದು ಈ ಭಾಗದ ಸಂಪ್ರದಾಯ. ಜಗತ್ತಿನ ಪ್ರಸಿದ್ಧ ತಿರುವಿತಾಂಕೂರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಾಲಯವು ತಮ್ಮ ಕಾರ್ಯಗಳ ಸಿದ್ಧಿಗಾಗಿ ಪುರುಷರು ಮಹಿಳೆಯರಂತೆ ವೇಷ ಧರಿವುದು ವಾಡಿಕೆ.
ಹೆಣ್ಣಿನ ಸೌಂದರ್ಯಕ್ಕೆ ಹೊಸ ಭಾವಗಳನ್ನು ಸೇರಿಸುತ್ತಾ ಇಷ್ಟಾರ್ಥ ಸಿದ್ಧಿಗಾಗಿ ಪುರುಷರು ಇಲ್ಲಿಗೆ ಬರುತ್ತಾರೆ. ಕಸಾವ್ ಸೀರೆ ಮತ್ತು ರೇಷ್ಮೆ ಸ್ಕರ್ಟ್ ಹಾಗೂ ವಿವಿಧ ಸ್ತ್ರೀಯರ ಉಡುಪುಗಳನ್ನು ಧರಿಸಿದ ಪುರುಷರು, ಆಧುನಿಕ ಸುಂದರಿಯರನ್ನು ಮೀರಿಸುವಂತೆ ಎಲ್ಲರ ಗಮನಸೆಳೆಯುವುದನ್ನು ಇಲ್ಲ ಕಾಣಬಹುದು. ಈ ಹಬ್ಬವನ್ನು ಮಾರ್ಚ್ 24 ಮತ್ತು 25 ರಂದು ಆಚರಿಸಲಾಯಿತು.
ಇಲ್ಲಿದೆ ವಿಭಿನ್ನ ಸಾಂಸ್ಕೃತಿಕ ಪರಂಪರೆ:ಹೆಣ್ಣಾಗಿ ಬಾಳಬಯಸುವ ಗಂಡಸರಿಗೆ ಈ ಸಂಪ್ರದಾಯವು ಸ್ವಾತಂತ್ರ್ಯ ನೀಡುತ್ತದೆ. ಮಾತು, ನೋಟದಿಂದಲೇ ಹೆಣ್ಣಾಗಿ ಮೆರೆದ ಸಾವಿರಕ್ಕೂ ಹೆಚ್ಚು ಪುರುಷ ಸುಂದರಿಯರ ಮಾಯಾಲೋಕ ಇಲ್ಲಿ ಸೃಷ್ಟಿಯಾಗಿತ್ತು. ಇದು ಅತ್ಯಂತ ಸಾಂಪ್ರದಾಯಿಕವಾದ ಚಾವರ ಕೋಟಂಕುಳಂಗರ ಚಮಯವಿಳಕ ಹಬ್ಬವಾಗಿದೆ. ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ವಿಶಿಷ್ಟ ಪದ್ಧತಿ ಇದಾಗಿದೆ. ದೇವಾಲಯವಿರುವ ಸ್ಥಳವು ಪ್ರಾಚೀನ ಕಾಲದಲ್ಲಿ ದಟ್ಟವಾದ ಅರಣ್ಯದಿಂದ ಕೂಡಿತ್ತು. ಇಂದು ಕಾಣಸಿಗುವ ದೇವಾಲಯದ ಪ್ರಾಂಗಣವು ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತದೆ. ಈ ನೀರು ಸಮೀಪದ ಹೊಲಗಳನ್ನು ಸಮೃದ್ಧ ಹಾಗೂ ಫಲವತ್ತಾಗಿಸುತ್ತಿತ್ತು. ಈ ದೇವಾಲಯದ ಸಮೀಪದ ಮಕ್ಕಳು ಆಟವಾಡಲು ಮತ್ತು ದನಕರುಗಳನ್ನು ಮೇಯಲು ಬರುತ್ತಿದ್ದರು.