ಅದಿಲಾಬಾದ್(ತೆಲಂಗಾಣ): ಇತ್ತೀಚಿನ ದಿನಗಳಲ್ಲಿ 90ರ ವಯಸ್ಸು ಸಮೀಪಿಸುತ್ತಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿಯುವವರ ಸಂಖ್ಯೆಯೇ ಹೆಚ್ಚು. ಆದರೆ ಬಾಲಯ್ಯ ಎಂಬುವವರು 91ರ ಪ್ರಾಯದಲ್ಲೂ ಸಲೀಸಾಗಿ ಯೋಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, ಇತರರಿಗೂ ಯೋಗದ ಮಹತ್ವ ಮತ್ತು ತಮ್ಮ ಅನುಭವಸ ಬಗ್ಗೆ ತಿಳಿಸಿಕೊಡುತ್ತಾರೆ.
ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು 2 ಕಿಲೋ ಮೀಟರ್ವರೆಗೆ ನಡೆದುಕೊಂಡು ಹೋಗುವುದು, ಅದಾದ ನಂತರ 1 ಗಂಟೆ ಕಾಲ ಯೋಗಾಸನ ಮಾಡುವುದು ಇವರ ದಿನ ನಿತ್ಯದ ಕಾರ್ಯಗಳಲ್ಲಿ ಒಂದಾಗಿದೆ. ಅವರು 8 ವರ್ಷದ ಬಾಲಕನಾಗಿದ್ದಾಗಿಂದ ಪ್ರಾರಂಭಿಸಿದ ಯೋಗಭ್ಯಾಸವನ್ನು 90ರ ಪ್ರಾಯದಲ್ಲೂ ಮುಂದುವರಿಸಿದ್ದಾರೆ. ಕಠಿಣವಾದ ಆಸನಗಳನ್ನು ಅನಾಯಾಸವಾಗಿ ಮಾಡಬಲ್ಲರು ಈ ಬಾಲಯ್ಯ.