ವಿಶಾಖಪಟ್ಟಣಂ(ಆಂಧ್ರಪ್ರದೇಶ):ಸುಮಾರು ಆರು ವರ್ಷಗಳ ಹಿಂದೆ ಬಾಲಕಿ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಇದೀಗ ಬಾಲಕಿ ಪೋಷಕರ ಮಡಿಲು ಸೇರಿದೆ. ವಿಶಾಖಪಟ್ಟಣಂ ಜಿಲ್ಲೆಯ ಚೋಡಾವರಂ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಯನ್ನ 2015ರ ಜೂನ್ 26ರಂದು ಅದೇ ಶಾಲೆಯ ಶಿಕ್ಷಕ ಕೊಯ್ಯನ ತಿರುಪತಿರಾವ್ ಅಪಹರಣ ಮಾಡಿದ್ದನು.
ವಿಶಾಖಪಟ್ಟಣಂದಿಂದ ದೆಹಲಿಗೆ ತೆರಳಿ ಅಲ್ಲಿಂದ ರಾಜಸ್ಥಾನಕ್ಕೆ ತೆರಳಿದ್ದರು. ಇದಾದ ಬಳಿಕ ಹರಿಯಾಣಕ್ಕೆ ಪ್ರವಾಸ ಕೈಗೊಂಡು ತದನಂತರ ತೆಲಂಗಾಣದ ನಿಜಾಮಾಬಾದ್ಗೆ ಬಂದಿದ್ದರು. ಇದಾದ ಬಳಿಕ ಸದ್ಯ ರಾಜಸ್ಥಾನದ ಜೋಗಿಘಟ್ಟದಲ್ಲಿ ವಾಸವಾಗಿದ್ದರು.
ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ
ಬಾಲಕಿ ಅಪಹರಣಗೊಂಡಾಗಿನಿಂದಲೂ ಪೋಷಕರು ಅನೇಕ ಪ್ರಯತ್ನ ಮಾಡಿದ್ದರು. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರದ ಕಾರಣ 2017ರಲ್ಲಿ ತಂದೆ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಪ್ರಕರಣ ಸಿಬಿಸಿಐಡಿಗೆ ಹಸ್ತಾಂತರಗೊಂಡಿತ್ತು. ಆದರೆ, ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಯುತ್ತಿಲ್ಲ ಎಂದು ಬಾಲಕಿ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಪಹರಣಕಾರ ಪತ್ತೆಯಾಗಿದ್ದು ಹೇಗೆ?