ಕರ್ನಾಟಕ

karnataka

ETV Bharat / bharat

ಎಂಟೇ ವರ್ಷ.. 25 ಭಾಷೆಯ ಮೂಲಕ ಮೇರು ಸಾಧನೆ: 95 ಕವನಗಳ ನಿರಂತರ ವಾಚಿಸುವ ಗುರಿ! - ಎಂಟೇ ವರ್ಷ 25 ಭಾಷೆಯ ಮೂಲಕ ಕೇರಳ ಬಾಲಕಿಯ ಮೇರು ಸಾಧನೆ

ಚಿಕ್ಕ ವಯಸ್ಸಿನಲ್ಲೇ ಈ ಬಾಲಕಿಯದ್ದು ಮೇರು ಸಾಧನೆ. ಧ್ವನಿ ಎಂಬ ಬಾಲಕಿ ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂಬ ವಾಕ್ಯವನ್ನು ಸುಮಾರು 25 ಭಾಷೆಗಳಲ್ಲಿ ಹೇಳುವ ಮೂಲಕ ದಾಖಲೆ ಬರೆದಿದ್ದಾಳೆ.

At 8 years, Dhwani is already a world record holder
ಎಂಟೇ ವರ್ಷ.. 25 ಭಾಷೆಯ ಮೂಲಕ ಮೇರು ಸಾಧನೆ: 95 ಕವನಗಳ ನಿರಂತರ ವಾಚಿಸುವ ಗುರಿ!

By

Published : May 25, 2022, 9:40 PM IST

Updated : May 25, 2022, 11:06 PM IST

ತಿರುವನಂತಪುರಂ( ಕೇರಳ):ತಿರುವನಂತಪುರದ ವಟ್ಟಿಯೂರಕಾವು ಮೂಲದ ಬಾಲಕಿ ಧ್ವನಿ ಸಣ್ಣ ವಯಸ್ಸಿನಲ್ಲೇ ಮೇರು ಸಾಧನೆ ಮಾಡಿ ಹೆತ್ತವರಿಗೆ ಕೀರ್ತಿ ತಂದಿದ್ದಾಳೆ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ದಿನದಿನಕ್ಕೂ ಧ್ವನಿ ತನ್ನ ಧ್ವನಿಯನ್ನ ವಿಶ್ವಾದ್ಯಂತ ಪಸರಿಸಲು ಮುಂದಾಗಿದ್ದಾಳೆ. ಈಗಾಗಲೇ ಅನೇಕ ದಾಖಲೆಗಳ ಪುಸ್ತಕಗಳಲ್ಲಿ ತನ್ನ ಹೆಸರನ್ನು ಬರೆಯಿಸಿಕೊಂಡಿದ್ದಾಳೆ.

'ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ' ಎಂಬ ವಾಕ್ಯವನ್ನು 25 ವಿವಿಧ ಭಾಷೆಗಳಲ್ಲಿ ಹೇಳುವ ಮೂಲಕ ಧ್ವನಿ ವಿಶೇಷ ಸಾಧನೆ ಮಾಡಿದ್ದಾಳೆ. ಈ ಪ್ರಯತ್ನದ ಮೂಲಕ ಧ್ವನಿ ತನ್ನ ಹೆಸರನ್ನು ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗುವಂತೆ ನೋಡಿಕೊಂಡಿದ್ದಾಳೆ.

ಬರೀ ವಿವಿಧ ಭಾಷೆಗಳಲ್ಲಿ ವಾಕ್ಯಗಳನ್ನು ಹೇಳುವುದಷ್ಟೇ ಮಾಡಿಲ್ಲ ಈ ಧ್ವನಿ... 22 ಕಥೆಗಳನ್ನ ನಿರಂತರವಾಗಿ ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಹೇಳುವ ಮೂಲಕ ವಿಶೇಷ ದಾಖಲೆ ಬರೆದಿದ್ದಾಳೆ. ಕೇವಲ 23 ನಿಮಿಷದಲ್ಲಿ 22 ಕಥೆಗಳನ್ನ ಎರಡೂ ಭಾಷೆಗಳಗಲ್ಲಿ ನಿರಂತರವಾಗಿ ಹಾಗೂ ನಿರರ್ಗಗಳವಾಗಿ ಹೇಳುವ ಮೂಲಕ ಸೈ ಎನಿಸಿಕೊಂಡಿದ್ದಾಳೆ.

ಇದೀಗ 8 ರ ಪೋರಿ ಧ್ವನಿ ಮಲಯಾಳಂನ ಖ್ಯಾತ ಕವಿ ಕುಂಜುನ್ನಿ ಮಾಶ್ ಅವರ 95 ಕವನಗಳನ್ನು ನಿರಂತರವಾಗಿ ವಾಚಿಸುವ ಮೂಲಕ ಹೊಸ ದಾಖಲೆಯನ್ನು ಬರೆಯುವ ಮಹಾ ಗುರಿಯನ್ನು ತಮ್ಮ ಮುಂದೆ ಹಾಕಿಕೊಂಡಿದ್ದಾರೆ. ಆಕೆಯ ಎಲ್ಲ ಪ್ರಯತ್ನಗಳಿಗೆ ತಂದೆ ಆದರ್ಶ್ ಮತ್ತು ತಾಯಿ ಲಕ್ಷ್ಮಿ ಬೆಂಬಲವಾಗಿ ನಿಂತಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್ ಮೂಲಕ ವಿಶಿಷ್ಟ ಕಲೆಯನ್ನ ಹಾಗೂ ಪ್ರತಿಭೆಯನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾಳೆ ಈ ಧ್ವನಿ.

ಇದನ್ನು ಓದಿ:ಕೇದಾರನಾಥ ಯಾತ್ರೆ: ಏಕಕಾಲಕ್ಕೆ 25 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಲಗ್ಗೆ; ಫುಲ್ ಜಾಮ್​​

Last Updated : May 25, 2022, 11:06 PM IST

For All Latest Updates

TAGGED:

ABOUT THE AUTHOR

...view details