ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಒಂದೇ ದಿನ 395 ಮಂದಿಯ ಉಸಿರು ನಿಲ್ಲಿಸಿದ ಕೊರೊನಾ - ಕೋವಿಡ್​ನಿಂದ ಒಂದೇ ದಿನಕ್ಕೆ ದೆಹಲಿಯಲ್ಲಿ ದಾಖಲೆಯ ಸಾವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್‌ 2ನೇ ಅಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ, ಆಕ್ಸಿಜನ್​ ಬಗ್ಗೆ ಯಾವುದೇ ರೀತಿಯಲ್ಲೂ ಭಯಪಡಬೇಡಿ. ಕೋವಿಡ್​ ರೋಗಿಗಳಿಗೆ ಬೇಕಾದ ಆಕ್ಸಿಜನ್​ ಈಗ ಲಭ್ಯವಿದೆ ಎಂದು ಸಿಎಂ ಕೇಜ್ರಿವಾಲ್​ ಹೇಳಿದ್ದಾರೆ.

Delhi covid report  Cases of Covid in Delhi  Delhi covid death report  death due to Covid in Delhi  covid cases in Delhi  Delhi covid news  ದೆಹಲಿಯಲ್ಲಿ ದಾಖಲೆಯ ಸಾವು  ಒಂದೇ ದಿನಕ್ಕೆ ದೆಹಲಿಯಲ್ಲಿ ದಾಖಲೆಯ ಸಾವು  ಕೋವಿಡ್​ನಿಂದ ಒಂದೇ ದಿನಕ್ಕೆ ದೆಹಲಿಯಲ್ಲಿ ದಾಖಲೆಯ ಸಾವು  ದೆಹಲಿ ಕೊರೊನಾ ವರದಿ
ಒಂದೇ ದಿನಕ್ಕೆ ದೆಹಲಿಯಲ್ಲಿ ದಾಖಲೆಯ ಸಾವು

By

Published : Apr 30, 2021, 10:13 AM IST

ದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ 24,235 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದ್ದು, 395 ಸೋಂಕಿತರು ಒಂದೇ ದಿನ ಪ್ರಾಣ ಕಳೆದುಕೊಂಡಿದ್ದಾರೆ.

ಈ ಮೂಲಕ ಕೋವಿಡ್​ನಿಂದಾಗಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 15,772ಕ್ಕೆ ಏರಿಕೆಯಾಗಿದೆ. 25,615 ಜನ ವೈರಸ್‌ನಿಂದ ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ ಸದ್ಯ 97,977 ಸಕ್ರಿಯ ಸೋಂಕು ಪ್ರಕರಣಗಳಿವೆ.

ಬೆಡ್​, ಆಕ್ಸಿಜನ್​ ಕೊರತೆ

ಕೋವಿಡ್​ ರೋಗಿಗಳಿಗೆ ಬೆಡ್​ ಜೊತೆ ಆಕ್ಸಿಜನ್​ ಕೊರತೆಯೂ ಉಂಟಾಗುತ್ತಿದೆ. ರೋಗಿಗಳು ಸಕಾಲದಲ್ಲಿ ಆಮ್ಲಜನಕ ಸಿಗದೇ ಸಾವನ್ನಪ್ಪುತ್ತಿದ್ದಾರೆ.

ಸಿಎಂ ಅಭಯ

ಆಕ್ಸಿಜನ್​ ಬಗ್ಗೆ ಯಾವುದೇ ರೀತಿಯಲ್ಲೂ ಭಯಪಡಬೇಡಿ. ಕೋವಿಡ್​ ರೋಗಿಗಳಿಗೆ ಬೇಕಾದ ಆಕ್ಸಿಜನ್​ ಈಗ ಲಭ್ಯವಿದೆ ಎಂದು ಸಿಎಂ ಕೇಜ್ರಿವಾಲ್​ ಹೇಳಿದ್ದಾರೆ.

ABOUT THE AUTHOR

...view details