ಮೇಷ :ನಿಮ್ಮ ಮಕ್ಕಳು ನಿಮ್ಮ ಆದ್ಯತೆಗಳ ಪಟ್ಟಿಯಲ್ಲಿ ಮೊದಲಿರುತ್ತಾರೆ. ನಿಮ್ಮ ಕೆಲಸಕ್ಕೆ ಹಾಕುವ ಪ್ರಯತ್ನಗಳಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತಾವೆ. ನೀವು ಸಾರ್ವಜನಿಕ ವಲಯದಲ್ಲಿ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಅದೃಷ್ಟದ ದಿನವಾಗುತ್ತದೆ.
ವೃಷಭ : ಇಂದು ನಿಮ್ಮ ಸೃಜನಶೀಲ ಪ್ರವೃತ್ತಿ ಸ್ಪರ್ಧಾತ್ಮಕತೆಯ ಭಾಗಕ್ಕೆ ಪೂರಕವಾಗಿರುತ್ತದೆ. ನಿಮ್ಮ ದಕ್ಷತೆ ಗುರುತಿಸದೇ ಹೋಗುವುದಿಲ್ಲ. ನಿಮ್ಮ ಕಾರ್ಯವೈಖರಿಯಿಂದ ಪ್ರತಿಯೊಬ್ಬರನ್ನೂ ಆಶ್ಚರ್ಯಗೊಳಿಸುತ್ತೀರಿ. ಇಂದು ನಿಮ್ಮ ಸಹೋದ್ಯೋಗಿಗಳನ್ನು ಖಂಡಿತಾ ಪ್ರೇರೇಪಣೆ ಮತ್ತು ಪ್ರಭಾವಿತಗೊಳಿಸುತ್ತೀರಿ.
ಮಿಥುನ : ಇಂದು ಭಾವನೆಗಳ ಚಕ್ರಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಮಾತಿಗೆ ಆದ್ಯತೆ ನೀಡುತ್ತೀರಿ. ಇದಿರಂದಾಗಿ ನೀವು ಹಿಂದೆ ಬಿಳುವ ಸಾಧ್ಯತೆಯಿದೆ. ಏಕೆಂದರೆ ನಿಮ್ಮ ಮೇಲೆ ಯಾರಿಗೆ ಒಳ್ಳೆಯ ಉದ್ದೇಶವಿದೆ ಅಥವಾ ಯಾರಿಗೆ ಕೆಟ್ಟ ಉದ್ದೇಶವಿದೆ ಎಂದು ನಿಮಗೆ ತಿಳಿಯುವುದಿಲ್ಲ. ಆದರೆ ಇದು ಬಹಳ ಕಾಲ ಉಳಿಯುವುದಿಲ್ಲ. ಏಕೆಂದರೆ ಸಂಜೆ ನಿಮಗೆ ಶುಭಸುದ್ದಿ ತರಬಹುದು.
ಕರ್ಕಾಟಕ : ನೀವು ಭವಿಷ್ಯಕ್ಕಾಗಿ ಯೋಜಿಸುತ್ತಿರುವುದರಿಂದ ನಿಮ್ಮ ದಿನ ಸ್ಫೂರ್ತಿದಾಯಕ ರೀತಿಯಲ್ಲಿ ಪ್ರಾರಂಭವಾಗುತ್ತದೆ. ನೀವು ನಿಮ್ಮ ವಿವರವಾದ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೀರಿ. ಭವಿಷ್ಯವನ್ನು ಯೋಜಿಸುವುದರಿಂದ ನೀವು ಇತರೆ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರಿ. ನೀವು ಕೈಗೊಳ್ಳುವ ಪ್ರತಿ ಕೆಲಸವೂ ದಿನದ ಅಂತ್ಯಕ್ಕೆ ಉತ್ಸಾಹಕರ ಫಲಿತಾಂಶ ನೀಡುತ್ತದೆ.
ಸಿಂಹ :ಉದ್ಯಮಗಳು ಮತ್ತು ಗುರಿಗಳು ನಿಮ್ಮ ಜೊತೆಯಲ್ಲಿರುವ ಸಾಧ್ಯತೆ ಇದೆ. ನೀವು ಕೈಗೊಂಡ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತೀರಾ. ನಿಮ್ಮ ಬಾಂಧವ್ಯದಲ್ಲಿ ಕೊಂಚ ತೊಂದರೆ ಎದುರಿಸಿದರೂ ಸುಲಭವಾಗಿ ನಿಭಾಯಿಸಬಹುದು.
ಕನ್ಯಾ : ಈ ದಿನ ನಿಮಗೆ ನಿಮ್ಮ ಕುಟುಂಬದ ವಿಷಯಗಳ ಮೌಲ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಮುಂದಿನ ವಿವಾದಗಳು ನಿಮ್ಮ ಅದ್ಭುತ ಸಂಧಾನ ಕೌಶಲ್ಯಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ ಮತ್ತು ಹಲವು ಪಾಠಗಳನ್ನು ಬೋಧಿಸುತ್ತದೆ.