ಕರ್ನಾಟಕ

karnataka

ETV Bharat / bharat

ಶುಕ್ರವಾರದ ಭವಿಷ್ಯ: ಈ ದಿನದ ನಿಮ್ಮ ರಾಶಿಫಲ ಹೇಗಿದೆ ತಿಳಿಯಿರಿ - ರಾಶಿಫಲ ಸುದ್ದಿ

ನಕ್ಷತ್ರಗಳು ಮತ್ತು ಗ್ರಹಗಳು ನಿಮ್ಮ ದಿನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಇಂದಿನ ಜಾತಕ ಈಟಿವಿ ಭಾರತ ಕರ್ನಾಟಕದಲ್ಲಿ ಓದಿ...

Astrological predictions, Astrological predictions for July 16 2021, horoscope predictions for July 16 2021, horoscope predictions, horoscope news, ಇಂದಿನ ರಾಶಿಫಲ, ಶುಕ್ರವಾರದ ಭವಿಷ್ಯ, ಈ ದಿನದ ನಿಮ್ಮ ರಾಶಿಫಲ ತಿಳಿಯಿರಿ, 16 ಜುಲೈ 2021ರ ರಾಶಿಫಲ ತಿಳಿಯಿರಿ, ರಾಶಿಫಲ ಸುದ್ದಿ,
ಶುಕ್ರವಾರದ ಭವಿಷ್ಯ

By

Published : Jul 16, 2021, 5:32 AM IST

ಶುಕ್ರವಾರದ ಭವಿಷ್ಯ

ಮೇಷ: ಕೆಲ ಉತ್ಸಾಹಕರ ಸುದ್ದಿಗಳು ಇಂದು ನಿಮ್ಮನ್ನು ಅತ್ಯಂತ ಉತ್ತೇಜಿತರನ್ನಾಗಿ ಇರಿಸುತ್ತವೆ. ಈ ಸುದ್ದಿ ವೈಯಕ್ತಿಕವಾಗಿರಬಹುದು ಅಥವಾ ವೃತ್ತಿಗೆ ಸಂಬಂಧಿಸಿದಾಗಿರಬಹುದು ಅಥವಾ ನಿಮ್ಮ ವೃತ್ತಿಯದ್ದೂ ಆಗಿರಬಹುದು, ಅಥವಾ ಸಾಮಾಜಿಕ ಸಭೆ, ಅಥವಾ ಕೆಲ ಹಣಕಾಸಿನ ಅನುಕೂಲವಾಗಿರಬಹುದು. ನೀವು ಯಾವಾಗಲೂ ನಿಮ್ಮ ಅತ್ಯುತ್ತಮವಾದುದನ್ನು ನೀಡುತ್ತೀರಿ ಮತ್ತು ಇವು ಅತ್ಯುತ್ತಮ ಫಲಿತಾಂಶಗಳಿಗೆ ಮುನ್ನಡೆಸುತ್ತದೆ.

ಶುಕ್ರವಾರದ ಭವಿಷ್ಯ

ವೃಷಭ: ನೀವು ಇಂದು ಅತ್ಯುತ್ತಮವಾಗಿ ಸಂಘಟಿತ ಮತ್ತು ಕೇಂದ್ರಿತವಾಗಿರುತ್ತೀರಿ ಮತ್ತು ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿನಯಪೂರ್ವಕರಾಗಿರುತ್ತೀರಿ. ಪರಿಸ್ಥಿತಿಗಳಿಗೆ ಅನುಗುಣವಾದ ಅತ್ಯುತ್ತಮ ತಂತ್ರ, ಕಾರ್ಯಯೋಜನೆಯನ್ನು ನೀವು ಗುರುತಿಸಿ ರೂಪಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಇಂದು, ನೀವು ಪ್ರಭಾವಿ, ನೈಜ ಒಡೆಯನಂತೆ ಕಾರ್ಯ ನಿರ್ವಹಿಸುತ್ತೀರಿ ಮತ್ತು ನೀವು ಏನನ್ನು ಕೈಗೊಂಡಿದ್ದೀರೋ ಅದನ್ನು ಸಾಧಿಸುವುದಲ್ಲಿ ನಿರ್ಲಕ್ಷಿಸುವುದಿಲ್ಲ.

ಶುಕ್ರವಾರದ ಭವಿಷ್ಯ

ಮಿಥುನ :ಈ ದಿನ ಮನೆಯಲ್ಲಿ ಸಂತೃಪ್ತಿ, ಆನಂದ ಮತ್ತು ಸಂಭ್ರಮಾಚರಣೆಯ ದಿನವಾಗಿದೆ. ನೀವು ಯುವಜನರೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಗುಣಮಟ್ಟದ ಸಮಯ ಕಳೆಯಲು ಪ್ರಯತ್ನಿಸುತ್ತೀರಿ. ಮನೆ ಸುಧಾರಣೆಯ ಕಾರ್ಯಗಳಲ್ಲಿ ಆಸಕ್ತಿ ತೆಗೆದುಕೊಳ್ಳುತ್ತೀರಿ.

ಶುಕ್ರವಾರದ ಭವಿಷ್ಯ

ಕರ್ಕಾಟಕ:ನಿಮ್ಮ ಪ್ರಿಯತಮೆಯೊಂದಿಗೆ ಶಾಪಿಂಗ್ ಹೊರಡುವುದು ಇಂದಿನ ಪ್ರಮುಖಾಂಶವಾಗಲಿದೆ. ನೀವು ಬಹುತೇಕ ಎಲ್ಲದಕ್ಕೂ ಹಣ ಪಾವತಿಸುತ್ತೀರಿ. ನೀವು ಈ ಧಾರಾಳ ಖರ್ಚನ್ನು ಪ್ರೀತಿಯಿಂದ ನಿರ್ಧರಿಸಿರುವುದರಿಂದ ನಿಮ್ಮ ಪ್ರಿಯತಮೆ ಸಂಜೆಯಲ್ಲಿ ಕೃತಜ್ಞತೆಯ ರಿಟರ್ನ್ ಗಿಫ್ಟ್ ಸಹ ನೀಡುತ್ತಾರೆ.

ಶುಕ್ರವಾರದ ಭವಿಷ್ಯ

ಸಿಂಹ :ಈ ದಿನ ವಿಷಯಗಳು ನಿಮ್ಮ ದಾರಿಯಲ್ಲಿ ನಡೆಯಲು ನಿರಾಕರಿಸುವ ದಿನಗಳಲ್ಲಿ ಒಂದಾಗಿದೆ. ಇದು ನಮ್ಮ ಒಳ್ಳೆಯದಕ್ಕೇ ಸಂಭವಿಸುತ್ತದೆ. ಅದನ್ನು ಕಷ್ಟಪಟ್ಟು ಹೊರಹಾಕುವ ಬದಲು ಮಾಡುವುದೇನೂ ಇಲ್ಲ ಮತ್ತು ನೈತಿಕ ಬೆಂಬಲದ ಗೋಪ್ಯ ಸಂಗ್ರಹ ಕಂಡುಕೊಳ್ಳಿ. ಒಳ್ಳೆಯ ಅಂಶವೆಂದರೆ ನೀವು ಸರಿಯಾದ ವ್ಯಕ್ತಿಯನ್ನು ಭೇಟಿಯಾಗುವುದು ನಿಮ್ಮ ಕಲ್ಪನಾಶಕ್ತಿ ಸುಧಾರಿಸಲು ನೆರವಾಗುತ್ತದೆ.

ಶುಕ್ರವಾರದ ಭವಿಷ್ಯ

ಕನ್ಯಾ:ನೀವು ನಿಮ್ಮ ಹೊಂದಿಕೊಳ್ಳುವಿಕೆ ಮತ್ತು ನಿಮ್ಮ ಸುತ್ತಮುತ್ತಲನ್ನು ಸುಸೂತ್ರಗೊಳಿಸುವ ನಿಮ್ಮ ಬಯಕೆಯಿಂದ ಜನರನ್ನು ಮೋಡಿ ಮಾಡುತ್ತೀರಿ. ಪ್ರೀತಿಯಲ್ಲಿರುವವರಿಗೆ ಅನಿರೀಕ್ಷಿತವಾದುದು ಸಂಭವಿಸಬಹುದು. ವಿಷಯಗಳು ನಿಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬದಲಾಗುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ. ಜವಾಬ್ದಾರಿ ತೆಗೆದುಕೊಳ್ಳುವ ಮತ್ತು ನಿಮ್ಮ ಸಂಪ್ರದಾಯಗಳನ್ನು ಗೌರವಿಸುವ ಮೂಲಕ ನಿಮ್ಮ ಕುಟುಂಬದ ಬಂಧವನ್ನು ಸದೃಢಗೊಳಿಸುವುದು ಸೂಕ್ತ.

ಶುಕ್ರವಾರದ ಭವಿಷ್ಯ

ತುಲಾ : ಇಂದು, ನಿಮ್ಮ ದಿನವಲ್ಲ. ಮುನ್ನೋಟಗಳು ಬಹಳ ಚೆನ್ನಾಗಿಯೇನೂ ಕಾಣುತ್ತಿಲ್ಲ. ಆದರೆ ಇದರಿಂದಾಗಿ ನೀವು ಆತಂಕಗೊಳ್ಳುವುದರಲ್ಲಿ ಅರ್ಥವಿಲ್ಲ. 'ಒಳ್ಳೆಯದಲ್ಲ' ಎಂದರೆ ಕೆಟ್ಟದ್ದು ಎಂದೇನೂ ತಿಳಿಯಬೇಕಿಲ್ಲ. ಹೇಗೇ ಇರಲಿ, ನಿಮಗೆ ಒತ್ತಡದ ದಿನವಾಗಿದ್ದರೂ ಸಂಜೆ ಅಷ್ಟೇ ಆನಂದಿಸಬಹುದಾಗಿದೆ. ಅಲ್ಲದೆ ಇಂದು ನಿಮ್ಮ ಪ್ರಿಯತಮೆಯೊಂದಿಗೆ ಕೆಲ ಆತ್ಮೀಯ ವಿಷಯಗಳನ್ನು ಚರ್ಚಿಸಲು ಬಯಸುತ್ತೀರಿ.

ಶುಕ್ರವಾರದ ಭವಿಷ್ಯ

ವೃಶ್ಚಿಕ : ಜೀವನ ಅತ್ಯುತ್ತಮ ಶಿಕ್ಷಕ ಎಂದು ಜನರು ಹೇಳುತ್ತಾರೆ. ಮತ್ತು ಇಂದು, ನೀವು ಕೂಡಾ ಇದನ್ನು ಅನುಭವಿಸುತ್ತೀರಿ. ನೀವು ಮಾರುಕಟ್ಟೆಯಲ್ಲಿ ತೀವ್ರವಾದ ಸ್ಪರ್ಧೆಯಿಂದ ಕಲಿಯಬಹುದು. ಇದು ಸಾಕಷ್ಟು ಈರ್ಷ್ಯೆಗೆ ಕಾರಣವಾದರೂ ಅದು ನಿಮಗೆ ಬಾಧಿಸುವುದಿಲ್ಲ. `ಮನುಷ್ಯರು ತಪ್ಪು ಮಾಡುವುದು ಸಹಜ, ಕ್ಷಮೆ ನೀಡುವುದು ದೈವಿಕ' ಎಂದು ಸದಾ ನೆನಪಿನಲ್ಲಿಟ್ಟುಕೊಳ್ಳಿರಿ. ಆದ್ದರಿಂದ ನೀವು ಕೆಲ ತಪ್ಪುಗಳನ್ನು ಮಾಡಿದರೂ ಒಳ್ಳೆಯದು.

ಶುಕ್ರವಾರದ ಭವಿಷ್ಯ

ಧನು :ಇಂದು ಗ್ರಾಹಕರು ಮತ್ತು ಪೂರೈಕೆದಾರರೊಂದಿಗೆ ಸಭೆಗಳ ಆಯೋಜನೆ ನಿಮ್ಮ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ತಾಳ್ಮೆಯು ಜನರಿಂದ ದೊರೆಯುವ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಆಲಿಸುವಂತೆ ಮಾಡುತ್ತದೆ. ಈ ಎಲ್ಲದರ ಫಲಿತಾಂಶವು ಅತ್ಯಂತ ಅನುಕೂಲಕರ ಮತ್ತು ಉತ್ಪಾದಕವಾಗಿರುತ್ತದೆ.

ಶುಕ್ರವಾರದ ಭವಿಷ್ಯ

ಮಕರ : ಇಂದು ನೀವು ಪರಿಪೂರ್ಣ ಸಂಗಾತಿ ಕಂಡುಕೊಳ್ಳುವ ಎಲ್ಲ ಸಾಧ್ಯತೆಗಳಿವೆ ಮತ್ತು ಆತ/ಆಕೆಗೆ ನಿಮ್ಮ ಭಾವನೆಗಳು ತಿಳಿಯುವಂತೆ ಮಾಡುತ್ತೀರಿ. ನಿಮ್ಮ ಕುಟುಂಬ ನಿಮಗೆ ಜಗತ್ತಾಗಿದೆ. ಮತ್ತು ಕಳೆದ ಕೆಲ ವರ್ಷಗಳಲ್ಲಿ ನೀವು ಇಂದು ಹೆಚ್ಚು ಮುಕ್ತವಾಗಿ ಅಭಿವ್ಯಕ್ತಿಸುತ್ತಿದ್ದೀರಿ. ನಿಮ್ಮ ಪ್ರೀತಿಯ ಭಾವನೆಗಳು ಅದೇ ರೀತಿಯಲ್ಲಿ ಪ್ರತಿಕ್ರಿಯಿಸಲ್ಪಡುತ್ತವೆ. ಮತ್ತು ನೀವು ಷರತ್ತುರಹಿತ ಮತ್ತು ಅಡ್ಡಿಯಿಲ್ಲದೆ ಪ್ರೀತಿಯನ್ನು ಪಡೆಯುತ್ತೀರಿ.

ಶುಕ್ರವಾರದ ಭವಿಷ್ಯ

ಕುಂಭ:ಇಂದು ನಿಮ್ಮಷ್ಟಕ್ಕೆ ನೀವು ಕಾಲ ಕಳೆಯಲು ಬಯಸುವ ದಿನವಾಗಿದೆ. ಆದರೆ, ಇದು ನೀವು ಬಯಸಿದ ಶಾಂತಿ ಮತ್ತು ನೆಮ್ಮದಿ ತರದೇ ಇರಬಹುದು. ಒಂದು ಅಹಿತಕರ ಸನ್ನಿವೇಶ ನಿಮಗೆ ವಾಸ್ತವದೊಂದಿಗೆ ವ್ಯವಹರಿಸಲು ಒತ್ತಾಯಿಸಬಹುದು. ಈಗ ನೀವು ನಿಮ್ಮ ದೇವರ ಭಕ್ತಿಯಿಂದ ಎಷ್ಟು ಶಕ್ತಿಯನ್ನು ಪಡೆಯಬಹುದು ಎಂದು ತಿಳಿದುಕೊಳ್ಳುತ್ತೀರಿ.

ಶುಕ್ರವಾರದ ಭವಿಷ್ಯ

ಮೀನ:ನಿಮ್ಮ ಸ್ಫೂರ್ತಿ ಹೆಚ್ಚಿಸಿಕೊಳ್ಳಲು ನಿಮಗೆ ಸಾಕಷ್ಟು ನೈತಿಕ ಬೆಂಬಲ ಅಗತ್ಯವಾದರೂ ನೀವು ಅದನ್ನು ನೀಡಬಲ್ಲ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಸಾಧ್ಯತೆ ಇದೆ. ನೀವು ಕೈ ಚೆಲ್ಲದೇ ಇರುವವರೆಗೂ ಸಕಾರಾತ್ಮಕ ಫಲಿತಾಂಶಗಳು ನಿಮ್ಮ ದಾರಿಗೆ ಬರುತ್ತವೆ. ನಿಮ್ಮ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಸ್ಪರ್ಧೆಯಲ್ಲಿ ಮುಂದೆ ಸಾಗಿರಿ.

ಶುಕ್ರವಾರದ ಭವಿಷ್ಯ

ABOUT THE AUTHOR

...view details