ಕರ್ನಾಟಕ

karnataka

ETV Bharat / bharat

ಗುರುವಾರದ ರಾಶಿ ಭವಿಷ್ಯ : ಈ ರಾಶಿಯವರು ಇಂದು ಭಾವನಾತ್ಮಕ ಸುಳಿಗೆ ಸಿಲುಕಿವಿರಿ

ಇಂದಿನ ರಾಶಿ ಭವಿಷ್ಯ ಹೀಗಿದೆ..

Astrological prediction for today
ಗುರುವಾರದ ರಾಶಿ ಭವಿಷ್ಯ

By

Published : Feb 16, 2023, 4:59 AM IST

ಮೇಷ :ಈ ದಿನ ಪರಿಪೂರ್ಣವಾಗಿ ಅದರಲ್ಲಿಯೂ ಸಾರ್ವಜನಿಕ ವಲಯ ಅಥವಾ ವೈದ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಚೆನ್ನಾಗಿರುತ್ತದೆ. ನೀವು ಸಾಕಷ್ಟು ಪ್ರಯತ್ನಗಳನ್ನು ಪಡುತ್ತೀರಿ ಮತ್ತು ದಿನದ ಅಂತ್ಯಕ್ಕೆ ನೀವು ಬಾಕಿ ಕೆಲಸಗಳನ್ನು ಪೂರೈಸುತ್ತೀರಿ. ನಿಮ್ಮ ಮಕ್ಕಳು ಕೇಳಿದ ಬೇಡಿಕೆಗಳನ್ನು ಪೂರೈಸುತ್ತೀರಿ. ಅಲ್ಲದೆ ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ.

ವೃಷಭ :ನಿಮ್ಮ ಸೃಜನಶೀಲ ಮತ್ತು ಸ್ಪರ್ಧಾತ್ಮಕ ಭಾಗವು ಇಂದು ಹೊತ್ತಿ ಉರಿಯುತ್ತದೆ. ನಿಮ್ಮ ಕೆಲಸದಲ್ಲಿನ ದಕ್ಷತೆ ನಿಮ್ಮ ಸಹೋದ್ಯೋಗಿಗಳುನ್ನು ಮೂಕರನ್ನಾಗಿಸುತ್ತದೆ. ನೀವು ಕೆಲಸದಲ್ಲಿ ದೊಡ್ಡವರನ್ನು ಪ್ರಭಾವಿಸುತ್ತೀರಿ.

ಮಿಥುನ :ನೀವು ಭಾವನಾತ್ಮಕ ಚಕ್ರಸುಳಿಯಲ್ಲಿ ಸಿಲುಕಿಕೊಳ್ಳುವುದನ್ನು ಕಾಣುತ್ತೀರಿ. ನೀವು ನಿಮ್ಮ ಮೆದುಳಿಗಿಂತ ಹೃದಯಕ್ಕೆ ಆದ್ಯತೆ ನೀಡುತ್ತೀರಿ. ಇದರಿಂದಾಗಿ, ನಿಮಗೆ ಯಾರು ಒಳ್ಳೆಯವರು ಮತ್ತು ಯಾರಿಗೆ ಕಟ್ಟ ಉದ್ದೇಶಗಳಿವೆ ಎಂದು ತಿಳಿಯಲು ಅಶಕ್ತರಾಗಿದ್ದೀರಿ. ಆದರೆ ದಿನದ ಅಂತ್ಯಕ್ಕೆ ನಿಮ್ಮ ಅದೃಷ್ಟ ಒಳ್ಳೆಯದಕ್ಕೆ ಬದಲಾಗುತ್ತದೆ.

ಕರ್ಕಾಟಕ : ಇಂದಿನಿಂದ ನಿಮ್ಮ ಉಜ್ವಲ ಭವಿಷ್ಯಕ್ಕೆ ಯೋಜನೆ ಪ್ರಾರಂಭಿಸುತ್ತೀರಿ. ನೀವು ನಿಮ್ಮ ಎಲ್ಲ ಯೋಜನೆಗಳನ್ನೂ ಕಾರ್ಯರೂಪಕ್ಕೆ ತರುತ್ತೀರಿ. ನಿಮ್ಮ ವಿವರವಾದ ಆಲೋಚನೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ನಿಮ್ಮ ಎಲ್ಲ ಪ್ರಯತ್ನಗಳಲ್ಲೂ ಯಶಸ್ಸು ನಿರೀಕ್ಷೆ ಮಾಡುವುದರಿಂದ ಈ ದಿನ ಅತ್ಯುತ್ತಮವಾಗಿದೆ.

ಸಿಂಹ :ನೀವು ಹೊಸ ಪ್ರಾಜೆಕ್ಟ್​ಗಳನ್ನು ತೆಗದುಕೊಳ್ಳುತ್ತೀರಿ ಮತ್ತು ನಿಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಪೂರೈಸುತ್ತೀರಿ. ಬಾಂಧವ್ಯಗಳನ್ನು ನಿಭಾಯಿಸುವಾಗ ನೀವು ಕೆಲವು ಅಡೆತಡೆಗಳನ್ನು ಎದುರಿಸುತ್ತೀರಿ. ಆದರೆ ಆ ಸಮಸ್ಯೆಗಳು ಸರಾಗವಾಗಿ ಇತ್ಯರ್ಥವಾಗುತ್ತವೆ.

ಕನ್ಯಾ :ಈ ದಿನ ನಿಮಗೆ ನಿಮ್ಮ ಕುಟುಂಬದ ಮೌಲ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಮುಂದಿನ ವಿವಾದಗಳು ನಿಮ್ಮ ಅದ್ಭುತ ಸಂಧಾನ ಕೌಶಲ್ಯಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ ಮತ್ತು ಹಲವು ಪಾಠಗಳನ್ನು ಬೋಧಿಸುತ್ತದೆ.

ತುಲಾ :ಭೋಜನ ರಸಿಕತೆ ಇಂದು ನಿಮ್ಮಲ್ಲಿ ಎಚ್ಚರಗೊಳ್ಳುತ್ತದೆ. ನಿಮಗೆ ದೊರೆಯುವ ಪ್ರತಿ ರುಚಿಯನ್ನೂ ಆಸ್ವಾದಿಸಿ. ಕೆಲಸದ ವಿಷಯದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಹಂತಕ್ಕೆ ಬರುತ್ತೀರಿ. ಆದರೆ ಚಿಂತಿಸಬೇಕಿಲ್ಲ. ದೇವರಿಗೆ ಕೃತಜ್ಞತೆ ಸಲ್ಲಿಸಿ ಮತ್ತು ದಾರಿ ಆಯ್ಕೆ ಮಾಡಿಕೊಳ್ಳುವುದು ಸುಲಭವಾಗಿ ಕಾಣುತ್ತೀರಿ.

ವೃಶ್ಚಿಕ :ನೀವು ಇಲ್ಲಿಯವರೆಗೂ ಬಹಳ ಕಾಲದಿಂದ ಕೆಲ ವಿಷಯಗಳನ್ನು ಉಳಿಸಿಕೊಂಡಿದ್ದೀರಿ. ಇಂದು ಅವುಗಳನ್ನು ಹೊರಗೆ ಚೆಲ್ಲುವ ಕಾಲ. ಇದು ನಿಮ್ಮ ಆರೋಗ್ಯದ ಮೇಲೆ ಅಪಾರ ಒತ್ತಡ ಉಂಟು ಮಾಡುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆದರೆ ಅದು ಕೊಂಚ ನಿರಾಳತೆ ನೀಡುತ್ತದೆ.

ಧನು :ಕಛೇರಿಯಲ್ಲಿ ನಿಮ್ಮ ಇಚ್ಛಾಶಕ್ತಿ ಮತ್ತು ಬದ್ಧತೆ ಸಾಕಷ್ಟು ಕಾರ್ಯದೊತ್ತಡ ಆಕರ್ಷಿಸಬಹುದು. ನೀವು ವರ್ಕೊಹಾಲಿಕ್ ಆಗುವ ಸಾಧ್ಯತೆಗಳಿವೆ. ಸಂಜೆಯ ವೇಳೆಗೆ, ನೀವು ವಿಶ್ರಾಂತಿ ಕಂಡುಕೊಳ್ಳುತ್ತೀರಿ ಮತ್ತು ಉಳಿದ ದಿನವನ್ನು ಆನಂದಿಸುತ್ತೀರಿ.

ಮಕರ :ನೀವು `ಆರೋಗ್ಯವೇ ಭಾಗ್ಯ’ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇರಿಸಿದ್ದೀರಿ. ನೀವು ಇಲ್ಲಿಯವರೆಗೂ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದೀರಿ. ಪ್ರಸ್ತುತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ದೂರದ ವಿಷಯ ಎನ್ನಿಸುತ್ತದೆ. ಆದರೆ ನೀವು ಅದನ್ನು ಪೂರ್ಣಗೊಳಿಸುತ್ತೀರಿ. ಸಕಾಲಕ್ಕೆ ಕೆಲಸ ಪೂರ್ಣಗೊಳಿಸದೇ ಇರುವುದರಿಂದ ನಿಮ್ಮ ಬಾಸ್​ ಅಸಮಾಧಾನ ಪಟ್ಟುಕೊಳ್ಳುತ್ತಾರೆ. ಇಂದು ನೀವು ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತೀರಿ.

ಕುಂಭ :ಒಂದು ಕುಟುಂಬವು ಒಟ್ಟಿಗೆ ಆಹಾರ ಸೇವಿಸುತ್ತದೆ, ಪ್ರಾರ್ಥನೆ ಮಾಡುತ್ತದೆ ಮತ್ತು ಒಟ್ಟಿಗೆ ಜೀವಿಸುತ್ತದೆ. ಇದು ನಿಮ್ಮ ವಿಷಯದಲ್ಲಿ ನಿಜವಾಗುತ್ತದೆ. ನೀವು ನಿಮ್ಮ ಕುಟುಂಬದೊಂದಿಗೆ ಕೊಂಚ ಗುಣಮಟ್ಟದ ಸಮಯ ಕಳೆಯುತ್ತೀರಿ. ಅವರೊಂದಿಗೆ ಜೀವಂತ ಕ್ಷಣಗಳನ್ನು ಕಳೆಯುತ್ತೀರಿ. ನೀವು ನೀಡುವ ಪ್ರೀತಿ ಹತ್ತು ಪಟ್ಟು ನಿಮಗೆ ಹಿಂದಿರುಗಿ ನೀಡಲಾಗುತ್ತದೆ. ನೀವು ಕೌಟುಂಬಿಕ ವ್ಯಕ್ತಿಯಾಗಿರುವುದಕ್ಕೆ ಶ್ಲಾಘನೆ ಮತ್ತು ಪುರಸ್ಕಾರ ಲಭಿಸುತ್ತದೆ.

ಮೀನ :ನಿಮ್ಮಲ್ಲಿ ಇಂದು ಕೊಂಚ ಬದಲಾವಣೆ ತರಲು ಪ್ರಯತ್ನಿಸಿ. ನಿಮಗೆ ಕೆಲಸ ಮಾಡಲು ಕೊಂಚ ಸಮಯ ತೆಗೆದುಕೊಳ್ಳಿ. ನಿಮ್ಮ ಬಯಕೆಯನ್ನು ಅನುಸರಿಸುವುದು ಮತ್ತು ಅದನ್ನು ನಿಮ್ಮ ವೃತ್ತಿಯಾಗಿಸುವುದು ದೀರ್ಘ ಸಮಯ ತೆಗೆದುಕೊಳ್ಳುತ್ತದೆ.

ABOUT THE AUTHOR

...view details