ನವದೆಹಲಿ: ಅಸ್ಟ್ರಾಜೆನಿಕಾ-ಆಕ್ಸ್‌ಫರ್ಡ್ ಕೋವಿಡ್ ಲಸಿಕೆ ಪಡೆದ ಹನ್ನೊಂದು ಜನರಲ್ಲಿ ಗುಯಿಲಿನ್ ಬ್ಯಾರೆ ಸಿಂಡ್ರೋಮ್ ಎಂಬ ನರಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ಭಾರತ ಮತ್ತು ಇಂಗ್ಲೆಂಡ್‌ನ ವೈದ್ಯರು ಎರಡು ಪ್ರತ್ಯೇಕ ಅಧ್ಯಯನ ನಡೆಸಿ ಈ ಅಂಶ ಪತ್ತೆ ಹಚ್ಚಿದ್ದಾರೆ.
ಕಳೆದ 10 ರಿಂದ 22 ದಿನಗಳ ಹಿಂದೆ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಈ ರೋಗ ಕಂಡು ಬರುತ್ತಿದೆ. ಕೇರಳದಲ್ಲಿ ಇಂಥ ಏಳು ಪ್ರಕರಣಗಳು ವರದಿಯಾಗಿವೆ. ಏಪ್ರಿಲ್ 22 ರವರೆಗೆ ಸುಮಾರು 1.2 ಮಿಲಿಯನ್ ಜನರಿಗೆ ಅಸ್ಟ್ರಾಜೆನಿಕಾ ಲಸಿಕೆ ನೀಡಲಾಗಿದೆ. ವ್ಯಾಕ್ಸಿನೇಷನ್ ಡ್ರೈವ್ ನಡೆದ ಎರಡು ವಾರಗಳಲ್ಲಿ ಈ ಪ್ರಕರಣಗಳು ಕಂಡು ಬಂದಿವೆ. ಕೇರಳದ ಏಳು ರೋಗಿಗಳ ಪೈಕಿ ಆರು ಜನರಿಗೆ ಮೆಕ್ಯಾನಿಕಲ್ ವೆಂಟಿಲೇಟರ್ ಅವಶ್ಯಕವಿದೆ ಎಂದು ಕೊಚ್ಚಿಯ ನರ ವಿಜ್ಞಾನ ವಿಭಾಗದ ಆಸ್ಟರ್ ಮೆಡ್ಸಿಟಿಯ ಬಾಬಿ ವರ್ಕಿ ಮರಮತ್ತಮ್ ಹೇಳಿದ್ದಾರೆ.