ಕರ್ನಾಟಕ

karnataka

ETV Bharat / bharat

ಮಲ್ಯ, ನೀರವ್​ ಮೋದಿ, ಚೋಕ್ಸಿಯಿಂದ ಬ್ಯಾಂಕ್​ಗಳಿಗಾದ ನಷ್ಟ ಎಷ್ಟು?.. ಸರ್ಕಾರ ಜಪ್ತಿ ಮಾಡಿದ ಆಸ್ತಿ ಎಷ್ಟು? - ನೀರವ್​ ಮೋದಿ ಆಸ್ತಿ ಮುಟ್ಟುಗೋಲು

ಇಂದು ವಿಷಯವನ್ನು ರಾಜ್ಯಸಭೆಯಲ್ಲಿ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್​ ಚೌಧರಿ ತಮ್ಮ ಲಿಖಿತ ಉತ್ತರದ ಮೂಲಕ ಬಹಿರಂಗ ಪಡಿಸಿದ್ದಾರೆ. ಅಲ್ಲದೇ, ಈ ಮೂವರಿಗೆ ಸೇರಿದ ಕಂಪನಿಗಳಿಂದ ಬ್ಯಾಂಕ್​ಗಳಿಗೆ 22,585 ಕೋಟಿ ರೂ. ನಷ್ಟ ಉಂಟಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ..

vijay mallya, nirav modi, mehul choksi
vijay mallya, nirav modi, mehul choksi

By

Published : Mar 22, 2022, 5:39 PM IST

ನವದೆಹಲಿ :ಸಾವಿರಾರು ಕೋಟಿಗಳ ಸಾಲ ಮಾಡಿ ದೇಶ ಬಿಟ್ಟ ಹೋಗಿರುವ ಉದ್ಯಮಿಗಳಾದ ವಿಜಯ್​ ಮಲ್ಯ, ನೀರವ್​ ಮೋದಿ ಹಾಗೂ ಮೇಹುಲ್​ ಚೋಕ್ಸಿಗೆ ಸಂಬಂಧಿಸಿದ 19,111 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ದೇಶ ಬಿಟ್ಟು ಹೋದ ನಂತರದಿಂದ 2022ರ ಮಾ.15ರವರೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಒಟ್ಟಾರೆ 19,111 ಕೋಟಿ ರೂ. ಆಸ್ತಿ-ಪಾಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಇದರಲ್ಲಿ 15,113 ಕೋಟಿ ಮೌಲ್ಯದ ಆಸ್ತಿಯನ್ನು ಸಾಲ ನೀಡಿದ ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಮರು ಹೊಂದಿಸಲಾಗಿದೆ. ಉಳಿದ 335.06 ಮೌಲ್ಯದ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಇಂದು ವಿಷಯವನ್ನು ರಾಜ್ಯಸಭೆಯಲ್ಲಿ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್​ ಚೌಧರಿ ತಮ್ಮ ಲಿಖಿತ ಉತ್ತರದ ಮೂಲಕ ಬಹಿರಂಗ ಪಡಿಸಿದ್ದಾರೆ. ಅಲ್ಲದೇ, ಈ ಮೂವರಿಗೆ ಸೇರಿದ ಕಂಪನಿಗಳಿಂದ ಬ್ಯಾಂಕ್​ಗಳಿಗೆ 22,585 ಕೋಟಿ ರೂ. ನಷ್ಟ ಉಂಟಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್,ಡಿಸೇಲ್, ಸಿಲಿಂಡರ್​​ ಬೆಲೆಯಲ್ಲಿ ಏರಿಕೆ: ಗ್ರಾಹಕರಿಗೆ ಶಾಕ್.. ಬೆಂಗಳೂರಿನಲ್ಲಿ ದರ ಎಷ್ಟು?

ABOUT THE AUTHOR

...view details