ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳ ಚುನಾವಣೆ: ಭಾರಿ ಮೊತ್ತದ ಆಸ್ತಿ ಘೊಷಣೆ ಮಾಡಿದ ಅಭ್ಯರ್ಥಿಗಳು

ಟಿಎಂಸಿ ಅಭ್ಯರ್ಥಿಯ ಆಸ್ತಿ ಶೇ 1985.68 ರಷ್ಟು ಹೆಚ್ಚಿದ್ದರೆ, ಬಿಜೆಪಿ ಅಭ್ಯರ್ಥಿ ಆಸ್ತಿ ಸುಮಾರು 300 ಪ್ರತಿಶತದಷ್ಟು ಹೆಚ್ಚಾಗಿದೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮತ್ತು ಶಾಸಕ ಜ್ಯೋತ್ಸ್ನಾ ಮಂಡಿಯ ಆಸ್ತಿಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.

Assets of TMC Candidate increased by 1985.68 percent, while BJP Candidate has growth of around 300 percent
ಭಾರೀ ಮೊತ್ತದ ಆಸ್ತಿ ಘೊಷಣೆ ಮಾಡಿದ ಅಭ್ಯರ್ಥಿಗಳು

By

Published : Mar 22, 2021, 3:18 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದ್ದು ಅಭ್ಯರ್ಥಿಗಳು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಟಿಎಂಸಿ ಅಭ್ಯರ್ಥಿಯ ಆಸ್ತಿ1985.68 ರಷ್ಟು ಹೆಚ್ಚಿದ್ದರೆ, ಬಿಜೆಪಿ ಅಭ್ಯರ್ಥಿ ಆಸ್ತಿ ಸುಮಾರು 300 ಪ್ರತಿಶತದಷ್ಟು ಹೆಚ್ಚಾಗಿದೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮತ್ತು ಶಾಸಕ ಜ್ಯೋತ್ಸ್ನಾ ಮಂಡಿಯ ಆಸ್ತಿಯಲ್ಲಿ ಭಾರೀ ಬೆಳವಣಿಗೆ ಕಂಡುಬಂದಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಇತ್ತೀಚಿನ ವರದಿಯ ಪ್ರಕಾರ, ಅವರ ಆದಾಯ 1985.68 ರಷ್ಟು ಹೆಚ್ಚಾಗಿದೆ. ಹಾಗೆಯೇ ಕೆಲವು ಅಭ್ಯರ್ಥಿಗಳ ಆಸ್ತಿ ಶೇಕಡಾ 200 ಕ್ಕಿಂತ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

2016 ರಲ್ಲಿ ಪುರುಲಿಯಾದಿಂದ ಗೆದ್ದ ಮಾಜಿ ಕಾಂಗ್ರೆಸ್ ಮುಖಂಡ ಸುದೀಪ್ ಕುಮಾರ್ ಮುಖರ್ಜಿ ಇತ್ತೀಚೆಗೆ ಬಿಜೆಪಿಗೆ ಸೇರಿದ್ದಾರೆ. ಇವರ ಆಸ್ತಿ ಕೂಡ ಶೇಕಡಾ 288.86 ರಷ್ಟು ಹೆಚ್ಚಾಗಿದೆ. ಐದು ವರ್ಷಗಳ ಹಿಂದೆ ಅವರ ಆದಾಯ 11,57,945 ರೂ. ಇತ್ತು. ಈಗ ಅಂದರೆ 2021 ರಲ್ಲಿ 45,02,782 ರೂ.ಗಳಾಗಿದೆ.

ABOUT THE AUTHOR

...view details