ಕರ್ನಾಟಕ

karnataka

ETV Bharat / bharat

ಪಂಚ ರಾಜ್ಯಗಳ ಚುನಾವಣೆ: ಯಾವುದೇ ಪಕ್ಷಕ್ಕೆ ಬಿಕೆಯು ಬೆಂಬಲ ಇಲ್ಲ.. ರಾಕೇಶ್​ ಟಿಕಾಯತ್​​​​ ಘೋಷಣೆ - ಭಾರತೀಯ ಕಿಸಾನ್​ ಯೂನಿಯನ್

ಭಾರತೀಯ ಕಿಸಾನ್​ ಯೂನಿಯನ್​ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ರೈತ ನಾಯಕ ರಾಕೇಶ್​ ಟಿಕಾಯತ್​ ಸ್ಪಷ್ಟಪಡಿಸಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ವರ್ಷಕ್ಕಿಂತಲೂ ಹೆಚ್ಚು ಕಾಲ ಹೋರಾಟ ನಡೆಸಿದ್ದ ಭಾರತೀಯ ಕಿಸಾನ್​ ಯೂನಿಯನ್​ ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಬೆಂಬಲಿಸದಿರಲು ನಿರ್ಧರಿಸಿದೆ.

Assembly polls 2022: Rakesh Tikait denies extending support to any political party
Assembly polls 2022: Rakesh Tikait denies extending support to any political party

By

Published : Jan 19, 2022, 11:07 AM IST

Updated : Jan 19, 2022, 11:14 AM IST

ಪ್ರಯಾಗರಾಜ್​( ಉತ್ತರಪ್ರದೇಶ):ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಹೋರಾಟ ನಡೆಸಿದ್ದ ಭಾರತೀಯ ಕಿಸಾನ್​ ಯೂನಿಯನ್​​ ಪಂಚ ರಾಜ್ಯಗಳ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಬಿಕೆಯು ಮುಖಂಡ ರಾಕೇಶ್​ ಟಿಕಾಯತ್​ ಸ್ಪಷ್ಟಪಡಿಸಿದ್ದಾರೆ.

ಪ್ರಯಾಗ್​​ರಾಜ್​ನಲ್ಲಿ ನಡೆಯುತ್ತಿರುವ ಮೂರು ದಿನಗಳ ಚಿಂತನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಯಾರೊಬ್ಬರಿಗೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು. ಭಾರತೀಯ ಕಿಸಾನ್​ ಪಕ್ಷದ ಅಧ್ಯಕ್ಷ ನರೇಶ್​ ಟಿಕಾಯತ್​ ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ ಹಾಗೂ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡುತ್ತದೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ರಾಕೇಶ್​ ಟಿಕಾಯತ್​ ಈ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಸಿಸೌಲಿಯಲ್ಲಿ ಬಿಜೆಪಿಯ ಸಂಜೀವ್ ಬಲ್ಯಾನ್ ಅವರೊಂದಿಗಿನ ಸಭೆಯ ಕೆಲವು ಗಂಟೆಗಳ ನಂತರ, ಬಿಕೆಯು ಮುಖ್ಯಸ್ಥರು ತಮ್ಮ ಹೇಳಿಕೆ ಹಿಂತೆಗೆದುಕೊಂಡರು. ಇದೇ ವೇಳೆ ನಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮೂರು ದಿನಗಳ ರೈತರ ‘ಚಿಂತನ ಶಿಬಿರ’ದಲ್ಲಿ ರೈತರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಕೇಂದ್ರದ ವಿರುದ್ಧ ಆಕ್ರೋಶ

ರೈತರು ಮತ್ತು ಸಂಘಟನೆಗೆ ಸಂಬಂಧಿಸಿದ ವಿಷಯಗಳನ್ನು ಮೂರು ದಿನಗಳ ಚಿಂತನ ಮಂಥನದಲ್ಲಿ ಚರ್ಚಿಸಲಾಗಿದೆ ಎಂದು ರಾಕೇಶ್ ಟಿಕಾಯತ್​ ಇದೇ ವೇಳೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಬಿಕೆಯು ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಯುಪಿ ವಿಧಾನಸಭೆ ಚುನಾವಣೆ: ಮುಲಾಯಂ ಸೊಸೆ ಬಿಜೆಪಿ ಸೇರ್ಪಡೆ

Last Updated : Jan 19, 2022, 11:14 AM IST

ABOUT THE AUTHOR

...view details