ಕರ್ನಾಟಕ

karnataka

ETV Bharat / bharat

ಕೊರೊನಾ ಸಂಕಷ್ಟದಲ್ಲಿ ಇಂದು'ಪಂಚ' ರಾಜ್ಯಗಳ ಎಲೆಕ್ಷನ್​ ರಿಸಲ್ಟ್ ​: ವಿಜಯಲಕ್ಷ್ಮಿ ಮೋದಿಗೋ? ದೀದಿಗೋ? - ಚುನಾವಣಾ ಫಲಿತಾಂಶ ಇಂದು ಲೈವ್

ಏಪ್ರಿಲ್ 6ರಂದು ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲಾಯಿತು. ಮಾರ್ಚ್ 27ರಿಂದ ಏಪ್ರಿಲ್ 6ರ ನಡುವೆ ಅಸ್ಸೋಂ ರಾಜ್ಯದ ಮತದಾರರು ಮೂರು ಹಂತಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಎಂಟು ಹಂತಗಳಲ್ಲಿ ಮತದಾನ ನಡೆಯಿತು. ಈ ಅವಧಿಯಲ್ಲಿ ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ ಮತ್ತು ಇತರ ರಾಜ್ಯಗಳ ವಿಧಾನಸಭಾ ಸ್ಥಾನಗಳೂ ನಡೆದವು. ಐದು ( ಒಂದು ಯುಟಿ ಸೇರಿ) ವಿಧಾನಸಭಾಗಳ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶಗಳು ಇಂದು ಘೋಷಿಸಲಾಗುವುದು..

Assembly Elections Results
Assembly Elections Results

By

Published : May 1, 2021, 10:34 PM IST

Updated : May 2, 2021, 12:04 AM IST

ನವದೆಹಲಿ :ಕೇರಳ, ಪಶ್ಚಿಮ ಬಂಗಾಳ, ಅಸ್ಸೋಂ ಮತ್ತು ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಇಂದು(ಮೇ 2ರಂದು) ಬೆಳಗ್ಗೆ 8 ಗಂಟೆಯಿಂದ ಚುನಾವಣಾ ಆಯೋಗ ಮತ ಎಣಿಕೆ ಆರಂಭಿಸಲಿದೆ.

ಏಪ್ರಿಲ್ 6ರಂದು ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲಾಯಿತು. ಮಾರ್ಚ್ 27ರಿಂದ ಏಪ್ರಿಲ್ 6ರ ನಡುವೆ ಅಸ್ಸೋಂ ರಾಜ್ಯದ ಮತದಾರರು ಮೂರು ಹಂತಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಎಂಟು ಹಂತಗಳಲ್ಲಿ ಮತದಾನ ನಡೆಯಿತು. ಈ ಅವಧಿಯಲ್ಲಿ ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ ಮತ್ತು ಇತರ ರಾಜ್ಯಗಳ ವಿಧಾನಸಭಾ ಸ್ಥಾನಗಳೂ ನಡೆದವು.

ಐದು ( ಒಂದು ಯುಟಿ ಸೇರಿ) ವಿಧಾನಸಭಾಗಳ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶಗಳು ಇಂದು ಘೋಷಿಸಲಾಗುವುದು.

ಚುನಾವಣೆಯ ಆಯೋಗವು (ಇಸಿಐ) ಸ್ಪಷ್ಟವಾದ ಸೂಚನೆಗಳನ್ನು ಹೊರಡಿಸಿದೆ. ಮತ ಎಣಿಕೆ ಪ್ರಾರಂಭದ 48 ಗಂಟೆಗಳ ಒಳಗೆ ನೆಗೆಟಿವ್​ ಕೋವಿಡ್​-19 ಆರ್‌ಟಿಪಿಸಿಆರ್ ವರದಿ ಅಥವಾ ಕ್ಷಿಪ್ರ ಆಂಟಿಜೆನ್ ಪರೀಕ್ಷೆಯಿಲ್ಲದೆ ಮತದಾನ ಏಜೆಂಟರು ಮತ್ತು ಅಭ್ಯರ್ಥಿಗಳ ಪ್ರವೇಶವನ್ನು ಎಣಿಕೆಯ ಸಭಾಂಗಣದೊಳಗೆ ಅನುಮತಿಸಲಾಗುವುದಿಲ್ಲ.

ವ್ಯಾಕ್ಸಿನೇಷನ್ ಪ್ರಮಾಣಪತ್ರ ತೋರಿಸಿ ಪ್ರವೇಶ ಪಡೆಯಬಹುದು. ವಿಜೇತ ಅಭ್ಯರ್ಥಿಯೊಂದಿಗೆ ಇಬ್ಬರು ಮಾತ್ರ ಇರಬೇಕು. ವಿಜಯ ಯಾತ್ರೆಗಳನ್ನು ನಡೆಸಲು ಇಸಿ ನಿಷೇಧಿಸಿದೆ. ಸಂಜೆ 5 ಗಂಟೆಯ ಒಳಗೆ ಅಂತಿಮ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.

ಮತದಾನ ಪ್ರಕ್ರಿಯೆಯು ಎಂಟು ಹಂತಗಳಲ್ಲಿ ಪೂರ್ಣಗೊಂಡಿರುವುದರಿಂದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಘೋಷಿಸಲು ಹೆಚ್ಚುವರಿ ಸಮಯ ತೆಗೆದುಕೊಳ್ಳಬಹುದು.

2021ರ ವಿಧಾನಸಭೆ ಚುನಾವಣೆಗಳು ಮತ್ತು ಉಪಚುನಾವಣೆಗಳ ಫಲಿತಾಂಶಗಳನ್ನು ಪರಿಶೀಲಿಸಲು, ಜನರು ಇಸಿಐ ಮತದಾರರ ಸಹಾಯವಾಣಿ ಅಪ್ಲಿಕೇಷನ್ ಅಥವಾ ಅಧಿಕೃತ ವೆಬ್‌ಸೈಟ್ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅಪ್ಲಿಕೇಶನ್ ಮತ್ತು ವೆಬ್ ಪೋರ್ಟಲ್ ಬಳಸಿ, ಜನರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಮುನ್ನಡೆ ಅಥವಾ ಹಿನ್ನಡೆ ತಿಳಿದುಕೊಳ್ಳಬಹುದು.

ಈಟಿವಿ ಭಾರತ ಕನ್ನಡ ಹಾಗೂ ಇಂಗ್ಲಿಷ್​ ಆನ್​ಲೈನ್​ನಲ್ಲಿ ವಿವಿಧ ಎಣಿಕೆಯ ಕೇಂದ್ರಗಳಿಂದ ಲೈವ್​ಗಳು ಲಭ್ಯವಿರುತ್ತವೆ. ಫಲಿತಾಂಶದ ಪ್ರವೃತ್ತಿಗಳ ಕುರಿತು ಹೊಸ-ಹೊಸ ಅಪ್ಡೇಟ್‌ಗಳನ್ನು ಪಡೆಯಲು ಓದುಗರು ಈಟಿವಿ ಭಾರತ ಆನ್​ಲೈನ್ ಪುಟ ಅಥವಾ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ವೀಕ್ಷಿಸಬಹುದು.

ಈ ರಾಜ್ಯಗಳಲ್ಲಿ ಕಳೆದ ಒಂದು ತಿಂಗಳಿಗಿಂತ ಹೆಚ್ಚು ಕಾಲ ಚುನಾವಣಾ ಚಟುವಟಿಕೆಗಳಲ್ಲಿ ರಾಜಕೀಯ ಪಕ್ಷಗಳು ತೋಡಗಿಸಿಕೊಂಡಿದ್ದವು. ಕೊರೊನಾ ಸಂಕಷ್ಟದಲ್ಲಿ ಕೇಂದ್ರ ಹಾಗೂ ರಾಜ್ಯ ಚುನಾವಣೆ ಆಯೋಗಗಳು ಸಾವಿರಾರು ಅಧಿಕಾಗಳು ಮತ್ತು ಪೊಲೀಸ್ ಹಾಗೂ ಮಿಲಿಟರ್ ಪಡೆಗಳನ್ನು ನಿಯೋಜಿಸಿ ಯಶಸ್ವಿಯಾಗಿ ಮತದಾನ ಪೂರ್ಣಗೊಳಿಸಿವೆ. ಇಂದು ಫಲಿತಾಂಶ ನೀಡಲು ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿವೆ.

ಕೇಂದ್ರಾಡಳಿ ಪ್ರದೇಶ ಪುದುಚೇರಿ, ಅಸ್ಸೋಂ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸರ್ಕಾರ ಸ್ಥಾಪನೆಗೆ ಅಗತ್ಯವಾದ ಸಂಖ್ಯಾ ಬಲ ಹಾಗೂ ಒಟ್ಟು ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ ಹೀಗಿದೆ..

1.ಕೇರಳ ವಿಧಾನಸಭೆ

ಒಟ್ಟು ಕ್ಷೇತ್ರಗಳು: 140

ಬಹುಮತ ಸಂಖ್ಯೆ: 71

2.ಪಶ್ಚಿಮ ಬಂಗಾಳ

ಒಟ್ಟು ಸ್ಥಾನಗಳು: 292 (ಒಟ್ಟು 294 ಸ್ಥಾನಗಳಲ್ಲಿ ಅಭ್ಯರ್ಥಿಗಳ ಸಾವಿನ ನಂತರ ಎರಡು ಕ್ಷೇತ್ರಗಳಲ್ಲಿ ಚುನಾವಣೆ ನಡೆದಿಲ್ಲ)

ಬಹುಮತ ಸಂಖ್ಯೆ: 148

3.ಅಸ್ಸೋಂ ವಿಧಾನಸಭೆ

ಒಟ್ಟು ಸ್ಥಾನಗಳು: 126

ಮ್ಯಾಜಿಕ್ ಸಂಖ್ಯೆ: 64

4.ತಮಿಳುನಾಡು ವಿಧಾನಸಭಾ

ಒಟ್ಟು ಸ್ಥಾನಗಳು: 234

ಬಹುಮತ ಸಂಖ್ಯೆ: 118

5.ಪುದುಚೇರಿ ವಿಧಾನಸಭಾ

ಒಟ್ಟು ಸ್ಥಾನಗಳು: 30 (ಮೂರು ನಾಮನಿರ್ದೇಶಿತ ಸದಸ್ಯರು)

ಬಹುಮತ ಸಂಖ್ಯೆ: 17

Last Updated : May 2, 2021, 12:04 AM IST

ABOUT THE AUTHOR

...view details