ನವದೆಹಲಿ:ಪಂಚ ಚುನಾವಣಾ ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿ ಅವಲೋಕಿಸಲು ಚುನಾವಣಾ ಆಯೋಗದ ಸಭೆ ಇಂದು ನಡೆಯಲಿದೆ. ಇಂದು ನಡೆಯಲಿರುವ ಸಭೆಯಲ್ಲಿ ನೇರ ಪ್ರಚಾರ ಮತ್ತು ರೋಡ್ ಶೋಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಉಲ್ಲೇಖಿಸಿ ಚುನಾವಣಾ ಆಯೋಗವು ಜನವರಿ 8 ರಂದು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರಕ್ಕೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ನೇರ ಪ್ರಚಾರ ಮತ್ತು ರೋಡ್ ಶೋಗಳನ್ನು ನಿಷೇಧಿಸಿತ್ತು. ಜನವರಿ 22 ರಂದು ನಡೆದ ಕೊನೆಯ ಸಭೆಯಲ್ಲಿ ಆಯೋಗವು ಐದು ರಾಜ್ಯಗಳಲ್ಲಿ ನೇರ ಪ್ರಚಾರ ಮತ್ತು ರೋಡ್ ಶೋಗಳ ಮೇಲಿನ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಿತ್ತು.
ಓದಿ:ಬಜೆಟ್ 2022: ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ದೇಶದ ಅರ್ಧದಷ್ಟು ಜನರ ಒತ್ತಾಯ - ಸಮೀಕ್ಷೆ