ಕರ್ನಾಟಕ

karnataka

ETV Bharat / bharat

ಪಂಚರಾಜ್ಯ ಫೈಟ್​: ಪಂಜಾಬ್, ಉತ್ತರಾಖಂಡ, ಗೋವಾದಲ್ಲಿ ಒಂದೇ ಹಂತ, ಮಣಿಪುರದಲ್ಲಿ 2 ಹಂತದ ವೋಟಿಂಗ್​​ - ಗೋವಾ ವಿಧಾನಸಭೆ ಚುನಾವಣೆ

Assembly Election date : ಮಹಾಮಾರಿ ಕೊರೊನಾ ಕರಿನೆರಳಿನ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ಮತದಾನ ನಡೆಸಲು ನಿರ್ಧರಿಸಿದೆ. ಕೋವಿಡ್ ನಿಯಮ ಗಮನದಲ್ಲಿಟ್ಟುಕೊಂಡು ಐದು ರಾಜ್ಯಗಳಲ್ಲಿ ಒಟ್ಟು ಏಳು ಹಂತದಲ್ಲಿ ಮತದಾನ ನಡೆಸಲಿದೆ..

Assembly Election 2022
Assembly Election 2022

By

Published : Jan 8, 2022, 5:40 PM IST

ನವದೆಹಲಿ :ಬಹುನಿರೀಕ್ಷಿತ ಗೋವಾ, ಪಂಜಾಬ್​, ಉತ್ತರಪ್ರದೇಶ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳ ವಿಧಾನಸಭೆಗೆ ಮುಹೂರ್ತ ಫಿಕ್ಸ್ ಮಾಡಿರುವ ಕೇಂದ್ರ ಚುನಾವಣಾ ಆಯೋಗ, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಿದೆ.

ಅತಿ ದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಉಳಿದಂತೆ ಗೋವಾ, ಪಂಜಾಬ್​, ಉತ್ತರಾಖಂಡ್​ ರಾಜ್ಯಗಳಿಗೆ ಒಂದೇ ಹಂತ ಹಾಗೂ ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಸಲು ನಿರ್ಧರಿಸಲಾಗಿದೆ.

ಮಣಿಪುರ ವಿಧಾನಸಭೆ ಚುನಾವಣೆ : ಒಟ್ಟು ಕ್ಷೇತ್ರ 60

  • ಮೊದಲ ಹಂತ ಫೆ. 27ರಂದು ಮತದಾನ
  • (38 ಕ್ಷೇತ್ರಗಳಲ್ಲಿ ವೋಟಿಂಗ್)
  • 2ನೇ ಹಂತದ ಚುನಾವಣೆ ಮಾರ್ಚ್​ 3
  • (22 ಕ್ಷೇತ್ರಗಳಿಗೆ ಮತದಾನ)

ಪಂಜಾಬ್​ ವಿಧಾನಸಭೆ ಚುನಾವಣೆ : ಒಟ್ಟು ಕ್ಷೇತ್ರ 117

  • ಫೆ. 14ರಂದು ಒಂದೇ ಹಂತದಲ್ಲಿ ವೋಟಿಂಗ್

ಗೋವಾ ವಿಧಾನಸಭೆ ಚುನಾವಣೆ : ಒಟ್ಟು ಕ್ಷೇತ್ರ 40

  • ಫೆ. 14ರಂದು ಒಂದೇ ಹಂತದಲ್ಲಿ ಮತದಾನ

ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ : ಒಟ್ಟು ಕ್ಷೇತ್ರ 70

  • ಫೆ. 14ರಂದು ಒಂದೇ ಹಂತದಲ್ಲಿ ವೋಟಿಂಗ್​​

ಎಲ್ಲ ಮತಕ್ಷೇತ್ರಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್​​ ಬಳಕೆ ಮಾಡಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಅತಿ ಹೆಚ್ಚಿನ ಸಿಬ್ಬಂದಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಚುನಾವಣೆ ಡ್ಯೂಟಿ ಮಾಡುವ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೋವಿಡ್​ನ ಎರಡು ಡೋಸ್​ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ

ಇದನ್ನೂ ಓದಿರಿ:ಉತ್ತರ ಪ್ರದೇಶ ಚುನಾವಣೆಗೆ ಮುಹೂರ್ತ ಫಿಕ್ಸ್​: 7 ಹಂತಗಳಲ್ಲಿ ವೋಟಿಂಗ್​, ಮಾರ್ಚ್​​ 10ಕ್ಕೆ ಫಲಿತಾಂಶ

ಒಮಿಕ್ರಾನ್​, ಕೋವಿಡ್​ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸವಾಗಿದೆ. ಆದರೆ, ಮತದಾನ ನಡೆಸಬೇಕಾಗಿರುವುದು ಇಲಾಖೆ ಕರ್ತವ್ಯವಾಗಿದೆ. ಕೇಂದ್ರದ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

ಎಲ್ಲ ಮತಗಟ್ಟೆಗಳಲ್ಲಿ ಥರ್ಮಲ್​ ಸ್ಕ್ರೀನಿಂಗ್​, ಮಾಸ್ಕ್​ ಹಾಗೂ ಸ್ಯಾನಿಟೈಸರ್​ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಎಲ್ಲ ರಾಜ್ಯಗಳಲ್ಲಿ ಕೊರೊನಾ ಸೋಂಕಿತರಿಗೆ ಪೋಸ್ಟಲ್​​ ವ್ಯವಸ್ಥೆ ಮಾಡಲಾಗಿದೆ ಎಂದಿದೆ.

ಪ್ರಮುಖವಾಗಿ ಮಣಿಪುರದಲ್ಲಿ ಪ್ರತಿ ಅಭ್ಯರ್ಥಿ ಚುನಾವಣಾ ವೆಚ್ಚಕ್ಕಾಗಿ 28 ಲಕ್ಷ ರೂ. ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್​ನಲ್ಲಿ ₹40 ಲಕ್ಷಕ್ಕೆ ವೆಚ್ಚವನ್ನ ನಿಗದಿಗೊಳಿಸಲಾಗಿದೆ.

ABOUT THE AUTHOR

...view details