ಕರ್ನಾಟಕ

karnataka

ETV Bharat / bharat

ಹಿಂಸಾಚಾರದ ಮಧ್ಯೆ ಮಣಿಪುರದಲ್ಲಿ 2ನೇ ಹಂತದ ಮತದಾನ ಮುಕ್ತಾಯ.. ಶೇ. 76ರಷ್ಟು ವೋಟಿಂಗ್​

ಮಣಿಪುರದ 22 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, 92 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ವಿವಿಪ್ಯಾಟ್​​ನಲ್ಲಿ ಭದ್ರವಾಗಿದೆ.

Manipur second phase voting end
Manipur second phase voting end

By

Published : Mar 5, 2022, 9:56 PM IST

ಇಂಫಾಲ್​​(ಮಣಿಪುರ): 60 ವಿಧಾನಸಭೆ ಕ್ಷೇತ್ರಗಳ ಮಣಿಪುರದಲ್ಲಿಂದು ಎರಡನೇ ಹಾಗೂ ಕೊನೆ ಹಂತದ ವೋಟಿಂಗ್ ನಡೆದಿದ್ದು, 10 ಜಿಲ್ಲೆಯ 22 ಕ್ಷೇತ್ರಗಳಲ್ಲಿ ಶೇ. 76ರಷ್ಟು ಮತದಾನವಾಗಿದೆ. ಎಲ್ಲ ಕ್ಷೇತ್ರಗಳ ಫಲಿತಾಂಶ ಮಾರ್ಚ್​​ 10ರಂದು ಬಹಿರಂಗಗೊಳ್ಳಲಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ವಿವಿಪ್ಯಾಟ್​​ ಸೇರಿದೆ. ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

ಕಳೆದ ಸೋಮವಾರ ಮೊದಲ ಹಂತದಲ್ಲಿ 38 ಸ್ಥಾನಗಳಿಗೆ ಮತದಾನವಾಗಿದ್ದು, 15 ಮಹಿಳೆಯರು ಸೇರಿದಂತೆ 173 ಅಭ್ಯರ್ಥಿಗಳು ಕಣದಲ್ಲಿದ್ದರು. ಇಂದು ನಡೆದ ಎರಡನೇ ಹಂತದಲ್ಲಿ 92 ಅಭ್ಯರ್ಥಿಗಳ ಭವಿಷ್ಯವನ್ನ 8.3 ಲಕ್ಷ ಮತದಾರರು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ನಕಲಿ ಮತದಾನವಾದ ಆರೋಪ ಕೇಳಿ ಬಂದಿರುವ ಕಾರಣ 12 ಬೂತ್​​ಗಳಲ್ಲಿ ಇಂದು ಮತ್ತೊಮ್ಮೆ ವೋಟಿಂಗ್ ಮಾಡಿಸಲಾಗಿದೆ. ಮೊದಲ ಹಂತದ 38 ಕ್ಷೇತ್ರಗಳಲ್ಲಿ ಶೇ. 78ರಷ್ಟು ಮತದಾನವಾಗಿದೆ.

ಇದನ್ನೂ ಓದಿರಿ:ಮಣಿಪುರದಲ್ಲಿ 2ನೇ ಹಂತದ ಮತದಾನದ ವೇಳೆ ಹಿಂಸಾಚಾರ: ಬಿಜೆಪಿ ಕಾರ್ಯಕರ್ತ ಸೇರಿ ಇಬ್ಬರು ಸಾವು

ಎರಡನೇ ಹಂತದ ಮತದಾನದಲ್ಲಿ ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್​, ಮಾಜಿ ಡಿಸಿಎಂ ಗೈಖಾಂಗಮ್​, ಹಾಲಿ ಕ್ರೀಡಾ ಸಚಿವ ಲಿಟ್ವಾವೊ ಹಾಕಿಪ್​, ಆರೋಗ್ಯ ಸಚಿವ ಲೊಸಿ ಡಿಖೊ ಸೇರಿದಂತೆ ಪ್ರಮುಖರು ಕಣದಲ್ಲಿದ್ದರು.

ಮತದಾನದ ವೇಳೆ ಹಿಂಸಾಚಾರ, ಇಬ್ಬರು ಸಾವು: ಮಣಿಪುರದಲ್ಲಿ ಇಂದು ನಡೆದ ಎರಡನೇ ಹಂತದ ಮತದಾನದ ವೇಳೆ ಹಿಂಸಾಚಾರ ಉಂಟಾಗಿದ್ದು, ಪರಿಣಾಮ ಬಿಜೆಪಿ ಕಾರ್ಯಕರ್ತ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಶುಕ್ರವಾರ ರಾತ್ರಿ ಮಣಿಪುರದ ಇಂಫಾಲ್​​​ನ ಬಿಜೆಪಿ ಉಚ್ಛಾಟಿತ ನಾಯಕ ಚೋಂಗ್ಥಮ್​ ಬಿಜೋಯ್​ ಅವರ ನಿವಾಸದ ಎದುರು ದುಷ್ಕರ್ಮಿಗಳು ಕಚ್ಚಾ ಬಾಂಬ್​ ಎಸೆದಿರುವ ಘಟನೆ ಸಹ ನಡೆದಿದೆ.

ABOUT THE AUTHOR

...view details