ಕರ್ನಾಟಕ

karnataka

ETV Bharat / bharat

ಪ.ಬಂಗಾಳ ಬೈಎಲೆಕ್ಷನ್​: ಮಮತಾ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಶೇ. 53.32ರಷ್ಟು ಮತದಾನ - ಭವಾನಿಪುರ ಮತಕ್ಷೇತ್ರ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮಾಡು ಇಲ್ಲವೇ ಮಡಿ ಆಗಿ ಪರಿಣಮಿಸಿರುವ ಭವಾನಿಪುರ ಕ್ಷೇತ್ರಕ್ಕೆ ಇಂದು ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

Assembly bypolls
Assembly bypolls

By

Published : Sep 30, 2021, 10:08 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ):ತೀವ್ರ ಕುತೂಹಲ ಕೆರಳಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದು ಶೇ. 53.32ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಗೆಲುವು ಸಾಧಿಸಿದರೆ ಮಾತ್ರ ಸಿಎಂ ಆಗಿ ಮುಂದುವರೆಯಲಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ನಂದಿಗ್ರಾಮ​ದಿಂದ ಕಣಕ್ಕಿಳಿದಿದ್ದ ಮಮತಾ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು. ಹೀಗಾಗಿ ಭವಾನಿಪುರ ಕ್ಷೇತ್ರದಿಂದ ಕಣಕ್ಕಿಳಿದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರ ವಿರುದ್ಧ ಬಿಜೆಪಿಯಿಂದ ಪ್ರಿಯಾಂಕಾ ಟಿಬ್ರೇವಾಲ್ ಸ್ಪರ್ಧೆ ಮಾಡಿದ್ದಾರೆ.

ಇದನ್ನೂ ಓದಿ:ಭವಾನಿಪುರ by-polls: ಬೂತ್ ವಶಪಡಿಸಿಕೊಳ್ಳಲು TMC ಯತ್ನಿಸುತ್ತಿದೆ - BJP ಅಭ್ಯರ್ಥಿ ಪ್ರಿಯಾಂಕಾ ಆರೋಪ

ಪಶ್ಚಿಮ ಬಂಗಾಳದಲ್ಲಿ ಒಟ್ಟು 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಭವಾನಿಪುರದಲ್ಲಿ ಶೇ. 53.32ರಷ್ಟು, ಸಂಸರ್‌ಗಂಜ್​ನಲ್ಲಿ ಶೇ 78.60 ಹಾಗೂ ಜಂಗೀಪುರ್​​ದಲ್ಲಿ ಶೇ. 76.12ರಷ್ಟು ವೋಟಿಂಗ್​ ಆಗಿದೆ. ಎಲ್ಲ ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮೂರು ಕ್ಷೇತ್ರಗಳ ಮತಎಣಿಕೆ ಅಕ್ಟೋಬರ್​ 3ರಂದು ನಡೆಯಲಿದೆ.

ABOUT THE AUTHOR

...view details