ಸತಾರಾ (ಮಹಾರಾಷ್ಟ್ರ): ಮಾಜಿ ಸರಪಂಚ್ ದಂಪತಿಯೊಂದು ನಾಲ್ಕು ತಿಂಗಳ ಗರ್ಭಿಣಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಸತಾರಾದ ಪಲಾಸವಾಡೆದಲ್ಲಿ ನಡೆದಿದೆ. ಈ ವೇಳೆ ಬಿಡಿಸಲು ಬಂದ ಆಕೆಯ ಪತಿಯನ್ನು ಥಳಿಸಿದ್ದಾರೆ.
ಹಲ್ಲೆ ಮಾಡುತ್ತಿರುವ ಮಾಜಿ ಸರಪಂಚ್ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಸುತ್ತಿರುವ ಸಿಂಧು ಬಾಜಿರಾವ್ ಸನಪ್ ಮತ್ತು ಆಕೆಯ ಪತಿ ಅರಣ್ಯ ರಕ್ಷಕ ಸೂರ್ಯಾಜಿ ತೋಂಬ್ರೆ ಥಳಿತಕ್ಕೊಳಗಾದವರು. ಕರ್ತವ್ಯನಿರತ ದಂಪತಿ ಸಿಂಧು ಹಾಗೂ ತೋಂಬ್ರೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪಾಲ್ಸವಾಡೆಯ ಜಂಟಿ ಅರಣ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ರಾಮಚಂದ್ರ ಗಂಗಾರಾಮ್ ಜನ್ಕರ್ ಮತ್ತು ಅವರ ಪತ್ನಿ ಪ್ರತಿಭಾ ಜಂಕರ್, ಅವರಿಗೆ ಚಪ್ಪಲಿ, ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಿದ್ದಾರೆ. ಪ್ರಕರಣ ಸಂಬಂಧ ಹಲ್ಲೆ ಮಾಡಿದ ದಂಪತಿ ವಿರುದ್ಧ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ನಡೆದದ್ದು ಯಾವಾಗ:
ಸಿಂಧು ಸನಪ್ ಪಾಲ್ಸವಡೆ ಮತ್ತು ಅವರ ಪತಿ ಸೂರ್ಯಾಜಿ ತೋಂಬ್ರೆ ಖಡಗಾಂವ್ ಬೀಟ್‌ನಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ನಿನ್ನೆ (ಬುಧವಾರ) ಬೆಳಗ್ಗೆ ಪ್ರಾಣಿಗಳ ಎಣಿಕೆಗೆ ತೆರಳಿದ್ದರು. ಅಲ್ಲಿಗೆ ಬಂದ ಪ್ರತಿಭಾ ಮತ್ತು ರಾಮಚಂದ್ರ ಕರ್ತವ್ಯನಿರತ ದಂಪತಿಯ ಮೇಲೆ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಥಳಿತಕ್ಕೊಳಗಾದ ಫಾರೆಸ್ಟ್ ಗಾರ್ಡ್ ದಂಪತಿ
ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ!
ಮರಳಿ ಪ್ರಶ್ನೆ ಮಾಡಿದ್ದಕ್ಕೆ ‘ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ಆಕೆಯ ಜುಟ್ಟು ಹಿಡಿದು ತಲೆಯನ್ನು ಬಂಡೆಗೆ ಹೊಡೆಸಿದಿದ್ದಾನೆ. ಚಪ್ಪಲಿ ಹಾಗೂ ದೊಣ್ಣೆಯಿಂದ ಹಲ್ಲೆ ಸಹ ಮಾಡಿರುವ ಕ್ರೂರ ದಂಪತಿ ಪರಾರಿಯಾಗಿದ್ದರು. ಅರಣ್ಯ ರಕ್ಷಕ ದಂಪತಿ ಸತಾರಾ ತಾಲೂಕು ಪೊಲೀಸ್ ಠಾಣೆಗೆ ಆಗಮಿಸಿ ಹಲ್ಲೆಗೈದ ದಂಪತಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಹಲ್ಲೆ ಮಾಡಿ ಕಣ್ಮರೆಯಾಗಿದ್ದ ಕ್ರೂರ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾನು ಕರ್ತವ್ಯಕ್ಕೆ ಸೇರಿದಾಗಿನಿಂದ ಅವರು (ಪಾಲಸವಾಡೆ ಗ್ರಾಮದ ಮಾಜಿ ಸರಪಂಚರು) ನನಗೆ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ನಾನು ಕೊಡಲು ನಿರಾಕರಿಸಿದ್ದರಿಂದ ನಿನ್ನೆ ನನ್ನ ಮೇಲೆ ಹಲ್ಲೆ ಮಾಡಿದರು. ಬಿಡಿಸಲು ಬಂದ ನನ್ನ ಪತಿಗೂ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಸಂತ್ರಸ್ತೆ, ಅರಣ್ಯ ರಕ್ಷಕ ಸಿಂಧು ಸನಪ್ ಹೇಳಿಕೆ ನೀಡಿದ್ದಾರೆ.
ಹಲ್ಲೆ ಮಾಡುತ್ತಿರುವ ಮಾಜಿ ಸರಪಂಚ್
ಸಚಿವ ಆದಿತ್ಯ ಠಾಕ್ರೆ ಟ್ವೀಟ್:
ಆರೋಪಿಯನ್ನು ಇಂದು ಬೆಳಗ್ಗೆ ಬಂಧಿಸಲಾಗಿದ್ದು, ಕಠಿಣ ಕಾನೂನು ಎದುರಿಸಬೇಕಾಗುತ್ತದೆ. ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಅರಣ್ಯ ರಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುಹಾಸ ಭೋಸಲೆ ಅರಣ್ಯ ರಕ್ಷಕರ ಮೇಲೆ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಘಟನೆಯನ್ನು ಮಹಿಳಾ ಆಯೋಗದ ಗಮನಕ್ಕೂ ತರಲಾಗಿದೆ. ಸದ್ಯ ಥಳಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:'ಧನುಷ್-ಐಶ್ವರ್ಯಾ ನಡುವೆ ವಿಚ್ಛೇದನವಾಗಿಲ್ಲ.. ಇದು ಕುಟುಂಬ ಕಲಹವಷ್ಟೇ': ಕಸ್ತೂರಿರಾಜ ಸ್ಪಷ್ಟನೆ