ಕರ್ನಾಟಕ

karnataka

ಜೈಲಲ್ಲಿದ್ದುಕೊಂಡೇ ಬಿಜೆಪಿ ವಿರುದ್ಧ ಗೆದ್ದ ರೈತ ಮುಖಂಡ.. ಅಸ್ಸೋಂನಲ್ಲಿ ಹೊಸ ದಾಖಲೆ

By

Published : May 2, 2021, 9:32 PM IST

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಹಗಲು-ರಾತ್ರಿ ಪ್ರಚಾರ ನಡೆಸಿ, ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆದರೆ ಇಲ್ಲೋರ್ವ ಅಭ್ಯರ್ಥಿ ಜೈಲಿನಲ್ಲಿದ್ದುಕೊಂಡೇ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ.

Akhil Gogoi
Akhil Gogoi

ಗುವಾಹಟಿ(ಅಸ್ಸೋಂ): ಜೈಲಿನಲ್ಲಿದ್ದುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿವೋರ್ವ ಇದೀಗ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಸ್ಸೋಂ ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ವರ್ಷ ಅಸ್ಸೋಂನಲ್ಲಿ ಪ್ರತಿಭಟನೆ ನಡೆದಿದ್ದ ವೇಳೆ ಆರ್​ಟಿಐ ಕಾರ್ಯಕರ್ತನು ಆಗಿರುವ ರೈತ ಮುಖಂಡ ಅಖಿಲ್​ ಗೊಗೊಯ್​ ಅವರನ್ನ ಬಂಧಿಸಲಾಗಿತ್ತು. ಅಲ್ಲಿಂದಲೇ ಅಸ್ಸೋಂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಇದೀಗ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಜೈಲಿನಿಂದಲೇ ಸ್ಪರ್ಧಿಸಿ ಚುನಾವಣೆಯಲ್ಲಿ ಜಯ ಗಳಿಸಿರುವ ಅಸ್ಸೋಂನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಸ್ಸೋಂನ ಸಿಬ್ಸಾಗರ್​ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಇವರು ಒಂದೇ ಒಂದು ದಿನ ಪ್ರಚಾರ ನಡೆಸಿಲ್ಲ. ಆದರೂ 57,173 ಮತ ಪಡೆದು ಬಿಜೆಪಿ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿದ್ದಾರೆ. ಇಲ್ಲಿ ಕಾಂಗ್ರೆಸ್​​ 45,394 ಮತ ಹಾಗೂ ಬಿಜೆಪಿ 19,323 ಮತ ಪಡೆದುಕೊಂಡಿದೆ. ಗೊಗೊಯ್​ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸುರಭಿ ರಾಜ್​ಕೋನ್​ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್​ ಗೆಲುವು.. ದೀದಿಗೆ ಪಿಎಂ ಅಭಿನಂದನೆ, ಕೇಂದ್ರದಿಂದ ಬೆಂಬಲದ ಭರವಸೆ

ಅಸ್ಸೋಂನಲ್ಲಿ ಪೌರತ್ವ ವಿರೋಧ ತಿದ್ದುಪಡಿ ಕಾಯ್ದೆ(ಸಿಎಎ) ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದ ವೇಳೆ ಗೊಗೊಯ್​ ಬಂಧನ ಮಾಡಲಾಗಿತ್ತು. ಇದಾದ ಬಳಿಕ ನಕ್ಸಲರೊಂದಿಗೆ ನಿಕಟ ಸಂಪರ್ಕವಿದೆ ಎಂಬ ಆರೋಪದ ಮೇಲೆ ಎನ್​ಐಎ ವಶಕ್ಕೆ ಪಡೆದುಕೊಂಡಿತ್ತು. ಇದಾದ ಬಳಿಕ ಅವರನ್ನ ವಿಚಾರಣೆ ರೂಪದಲ್ಲಿ ಜೈಲಿನಲ್ಲಿಡಲಾಗಿತ್ತು. ಅಲ್ಲಿಂದ ಚುನಾವಣೆ ಸ್ಪರ್ಧಿಸಿದ್ದ ಅವರು ಇದೀಗ ವಿಜಯಪತಾಕೆ ಹಾರಿಸಿದ್ದಾರೆ.

ABOUT THE AUTHOR

...view details