ಗುವಾಹಟಿ(ಅಸ್ಸೋಂ): ಜನಪ್ರೀಯ ಹಾಡುಗಾರ್ತಿ ವಿಟಾಲಿ ದಾಸ್ ಮಹಾಮಾರಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿಗೊಳಗಾಗಿದ್ದ ವಿಟಾಲಿ ಏಪ್ರಿಲ್ 14ರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕೋವಿಡ್ ಮಹಾಮಾರಿಗೆ ಅಸ್ಸೋಂ ಸಿಂಗರ್ ವಿಟಾಲಿ ದಾಸ್ ಬಲಿ! - ಅಸ್ಸೋಂ ಸಿಂಗರ್ ವಿಟಾಲಿ ದಾಸ್ ಬಲಿ
ಮಹಾಮಾರಿ ಕೊರೊನಾ ವೈರಸ್ಗೆ ಇದೀಗ ಅಸ್ಸೋಂ ಸಿಂಗರ್ ವಿಟಾಲಿ ದಾಸ್ ಬಲಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
![ಕೋವಿಡ್ ಮಹಾಮಾರಿಗೆ ಅಸ್ಸೋಂ ಸಿಂಗರ್ ವಿಟಾಲಿ ದಾಸ್ ಬಲಿ! singer Vitali Das](https://etvbharatimages.akamaized.net/etvbharat/prod-images/768-512-11490039-542-11490039-1619021434097.jpg)
singer Vitali Das
ಗುವಾಹಟಿಯ ಕಲ್ಪಾಹರ್ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಿಂಗರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಸ್ಸೋಂನ ಪ್ರಮುಖ ಹಾಡುಗಾರ್ತಿಯಾಗಿದ್ದ ವಿಟಾಲಿ ದಾಸ್ ಅನೇಕ ಜನಪ್ರೀಯ ಹಾಡುಗಳನ್ನ ಹಾಡಿದ್ದು, ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕಳೆದ ಕೆಲ ದಿನಗಳಿಂದ ಅಸ್ಸೋಂನಲ್ಲಿ ಎರಡನೇ ಹಂತದ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು, ಅನೇಕರು ಡೆಡ್ಲಿ ವೈರಸ್ಗೆ ಬಲಿಯಾಗುತ್ತಿದ್ದಾರೆ.