ಗುವಾಹಟಿ:ಅಸ್ಸೋಂನಜೂ-ಕಮ್-ಬೊಟಾನಿಕಲ್ ಮೃಗಾಲಯದಲ್ಲಿ ಕಾಜಿ ಹೆಸರಿನ ರಾಯಲ್ ಬೆಂಗಾಲ್ ಹುಲಿ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಮೃಗಾಲಯದಲ್ಲಿ ರಾಯಲ್ ಬೆಂಗಾಲ್ ಹುಲಿಗಳ ಸಂಖ್ಯೆ 9 ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ 2020ರ ಆಗಸ್ಟ್ನಲ್ಲಿ ಕಾಜಿ, ಸುಲ್ತಾನ್ ಮತ್ತು ಸುರೇಶ್ ಎಂಬ ಎರಡು ಮರಿಗಳಿಗೆ ನೀಡಿತ್ತು. ಸದ್ಯ ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ.
ತಾಯಿ ಮತ್ತು ಮರಿಗಳು ಆರೋಗ್ಯವಾಗಿದ್ದು, ಮೃಗಾಲಯದ ಸಿಬ್ಬಂದಿ ಮರಿಗಳನ್ನು ಹೀಟರ್‌ಗಳು ಮತ್ತು ಸಾಕಷ್ಟು ಒಣ ಒಣಹುಲ್ಲು ಒದಗಿಸುವ ಮೂಲಕ ಅವುಗಳನ್ನು ಕೊರೆಯುವ ಚಳಿಯಿಂದ ರಕ್ಷಿಸುತ್ತಿದ್ದಾರೆ. ಮೃಗಾಯಲದಲ್ಲಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೃಗಾಲಯದ ಡಿಎಫ್‌ಒ ಡಾ.ಅಶ್ವಿನಿ ಕುಮಾರ್ ಮಾಹಿತಿ ನೀಡಿದ್ದಾರೆ.
ತಾಯಿಗೆ ಪೌಷ್ಟಿಕಾಂಶದ ಆಹಾರದೊಂದಿಗೆ ಕಾಳಜಿ ವಹಿಸಲಾಗುತ್ತಿದೆ. ಪಶುವೈದ್ಯರ ಸಲಹೆ ಮೇರೆಗೆ ತಾಯಿ ಹುಲಿಗೆ ಸುಮಾರು 6ರಿಂದ 7 ಕೆಜಿ ಮಾಂಸವನ್ನು ಆಹಾರದೊಂದಿಗೆ ನೀಡಲಾಗುತ್ತದೆ. ತಾಯಿ ಮತ್ತು ಮರಿಗಳು ಯಾವುದೇ ಕಾಯಿಲೆಗೆ ತುತ್ತಾಗದಂತೆ ಮೃಗಾಲಯದ ಆವರಣದ ಸುತ್ತಮುತ್ತಲೂ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಲಾಗುತ್ತಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್ ಸಹಾಯ್ ಹೇಳಿದ್ದಾರೆ.
ಇದೇ ವೇಳೆ, ಪರಿಸರ ಮತ್ತು ಅರಣ್ಯ ಸಚಿವ ಪರಿಮಳ್ ಸುಕ್ಲಬೈದ್ಯ ಅವರಿಗೆ ಹೊಸದಾಗಿ ಹುಟ್ಟಿದ ಮರಿಗಳಿಗೆ ಹೆಸರುಗಳನ್ನು ಸೂಚಿಸುವಂತೆ ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸುಕ್ಲಬೈದ್ಯ ಅವರು ಮೃಗಾಲಯದಲ್ಲಿ ಅಧಿಕ ಪ್ರಾಣಿಗಳಿಗೆ ಹೆಸರುಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಕಂಠವನ್ನು ಯಾರೊಬ್ಬರೂ ಹೊಂದಿಸಲಾರರು: ನಟ ಶತ್ರುಘ್ನ ಸಿನ್ಹಾ