ಬರ್ಪೇಟಾ(ಅಸ್ಸೋಂ):ಬಾಂಗ್ಲಾದೇಶದಲ್ಲಿನ ಅಲ್‌ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಆರು ಮಂದಿ ಶಂಕಿತರನ್ನ ಅಸ್ಸೋಂನ ಬರ್ಪೇಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತಾಭ್ ಸಿನ್ಹಾ ಈ ವಿಷಯ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನ ಮುಫ್ತಿ ಸೈಲೆಮಾನ್, ಜೆಹಿದುಲ್ ಇಸ್ಲಾಂ, ಸದ್ದಾನ್ ಹುಸೇನ್, ರಸಿದುಲ್ ಇಸ್ಲಾಂ, ಮುಷರಫ್ ಹುಸೇನ್ ಮತ್ತು ಮಕಿಬುಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಆರು ಮಂದಿ ಬಾಂಗ್ಲಾದೇಶದ ಅಲ್‌ಖೈದಾ ಸಂಘಟನೆಯ ಪ್ರಮುಖ ಮೊಹಮ್ಮದ್ ಸುಮನ್ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.