ಗುವಾಹತಿ (ಅಸ್ಸೋಂ):ತನ್ನ ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಅಸ್ಸೋಂ ಮಹಿಳಾ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಕೂಡ ಈಗ ಜೈಲು ಹಕ್ಕಿಯಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜುನ್ಮೋನಿ ರಾಭಾ ಬಂಧನವಾಗಿದ್ದು, ಬಂಧನವಾಗುತ್ತಿದ್ದಂತೆ ಇವರನ್ನು ಸೇವೆಯಿಂದಲೂ ಅಮಾನತು ಮಾಡಲಾಗಿದೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಕಳೆದ ತಿಂಗಳು ವಂಚನೆ ಪ್ರಕರಣದಲ್ಲಿ ತನ್ನ ಭಾವಿ ಪತಿ ಪೊಗಾಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೇ, ನಂತರದಲ್ಲಿ ಆತನನ್ನು ಭಾವಿ ಪತ್ನಿಯೇ ಬಂಧಿಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಲೇಡಿ ಸಿಂಗಂ ಎಂದೇ ರಾಭಾ ಫೇಮಸ್ ಆಗಿದ್ದರು. ಇದೀಗ ಇದೇ ಲೇಡಿ ಸಿಂಗಂ ಭ್ರಷ್ಟಾಚಾರ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ.